ನಾಯಕನಹಟ್ಟಿ
ಹಟ್ಟಿ ತಿಪ್ಪಯ್ಯನ ತೇರಿಗೆ
ಕಳಶ ಪ್ರತಿಷ್ಠಾಪನೆ
ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್ 16 ರಂದು
ನಡೆಯಲಿದ್ದು, ಅದರ ಪ್ರಯುಕ್ತ ಬುಧವಾರ ತೇರಿಗೆ ಕಳಶ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಯಿತು.
ಜಾತ್ರೆಗೆ 5 ದಿನಗಳು ಬಾಕಿಯಿದ್ದು, ಬೃಹತ್ ರಥಕ್ಕೆ ಕಳಶ ಪ್ರತಿಷ್ಠಾಪಿಸುವುದು ಸಂಪ್ರದಾಯ. ಗ್ರಾಮದ ಬಾಬುದಾರರು ಮತ್ತು ದೈವಸ್ಥರು ಕಳಶವನ್ನು ಪಟ್ಟಣದ ಒಳಮಠದಿಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳ ಮೂಲಕ ಮೆರವಣಿಗೆಯಲ್ಲಿ ದೊಡ್ಡರಥದ ಬಳಿ ತಂದರು. ನಂತರ ಕಳಶವನ್ನು ಕಂಬಳಿಯ ಗದ್ದಿಗೆ ಮೇಲಿಟ್ಟು ಶಾಸ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಅಂದಾಜು 60. ಕೆಜಿ ತೂಕದ 6. ಅಡಿ
ನಾಯಕನಹಟ್ಟಿಯಲ್ಲಿ ಬುಧವಾರ ಶ್ರೀ ಗುರುತಿಪ್ಪೇರುದ್ರಸ್ವಾಮಿ ತೇರಿಗೆ ಕಳಶ ಪ್ರತಿಷ್ಠಾಪಿಸುವುದಕ್ಕೂ ಮುನ್ನ ಪೂಜೆ ನೆರವೇರಿಸಲಾಯಿತು.
ಎತ್ತರದ ನೂತನ ಕಳಶವನ್ನು ಹಗ್ಗದ ಸಹಾಯದಿಂದ ರಥದ ಮೇಲಕ್ಕೆ ಎಳೆದು ಪ್ರತಿಷ್ಠಾಪಿಸಲಾಯಿತು.
ನೂರಾರು ಭಕ್ತರು ತಿಪ್ಪೇರುದ್ರ ಸ್ವಾಮಿಗೆ ಜಯಘೋಷ ಕೂಗಿದರು. ಈ ಮೂಲಕ ವಿಧ್ಯುಕ್ತವಾಗಿ ಜಾತ್ರೆಗೆ
ಚಾಲನೆ ನೀಡಲಾಯಿತು. ಕಳಶ ಪ್ರತಿ ಷ್ಠಾಪನೆಯ ನಂತರ ರಥಕ್ಕೆ ಬಣ್ಣಗಳ ಬಾವುಟಗಳನ್ನು ಜೋಡಿಸುವ ಕಾರ್ಯ ಮಾಡಲಾಗುತ್ತದೆ. ಗ್ರಾಮದ ಪ್ರತಿಯೊಂದು ಸಮುದಾಯದ ಬಾಬುದಾರರು,
ದೈವಸ್ಥರು
ಗ್ರಾಮಸ್ಥರಿಗೆ ಜಾತ್ರೆಗೆ ಅಧಿಕೃತವಾದ ಅಹ್ವಾನ ನೀಡಲಾಗುತ್ತದೆ.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಭಕ್ತರಿಗೂ ಪಾನಕ, ಕೋಸಂಬರಿ ಹಾಗೂ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ ,ಪ.ಪಂ. ಸದಸ್ಯರಾದ ಜೆ.ಆರ್.ರವಿಕುಮಾರ್, ಎನ್.ಮಹಾಂತಣ್ಣ, ಅಬಕಾರಿ ತಿಪ್ಪೇಸ್ವಾಮಿ, ಗ್ರಾಮಸ್ಥರಾದ ದಳವಾಯಿ ತಿಪ್ಪೇಸ್ವಾಮಿ, ಕೆ.ಎನ್. ತಿಪ್ಪೇರುದ್ರಪ್ಪ, ಜೆ.ಪಿ.ರವಿಶಂಕರ್, ಉಮೇಶ್, ದೊರೆತಿಪ್ಪೇಸ್ವಾಮಿ, ರುದ್ರಮುನಿ,ಸಿಬ್ಬಂದಿ ಸತೀಶ್, ಶಿವಣ್ಣ, ಶಿವಕುಮಾರ್, ಶಂಕರಪ್ಪ, ಮಂಜುನಾಥ್, ಮಹಾದೇವ ಡ್ರೈವರ್ ಚನ್ನಪ್ಪ,
ಇದ್ದರು.

