ಚಳ್ಳಕೆರೆ :
ನಗರದ ಜನಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿರು ಹಿನ್ನಲೆಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸರ್ಕಾರಿ ಭೂಮಿ ಅವಶ್ಯಕತೆ ಇರುವುದರಿಂದ ಜನಪ್ರತಿನಿಧಿಗಳ ಹಾಗು ಸಾರ್ವಜನಿಕರ ಮನವಿ‌ ಮೇರೆಗೆ ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ತಹಶಿಲ್ದಾರ್ ಗೆ ಮನವಿ ಮಾಡಿದ್ದಾರೆ.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಗರಸಭೆ ಅಧ್ಯಕ್ಷರು ತಹಸಿಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ನಗರದ 31 ವಾರ್ಡ್ ಗಳ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನದ ಜಾಗ ಮೀಸಲಿರಿಸಬೇಕು ಎಂದು ಒತ್ತಾಯಿಸಿದ್ದಾರೆ

ನಗರದ ಹಲವು ಪ್ರದೇಶಗಾಳದ ಹಳೇ ಟೌನ್ , ಶಾಂತಿನಗರ, ಮದಕರಿ‌ನಗರ , ಕಾಟಪ್ಪನ ಹಟ್ಟಿ, ಆಸರ್ ಮಹಲ್ಲಾ ಇನ್ನು ಅನೇಕ ವಾರ್ಡಗಳ ನಾಗರೀಕರು ಈಗಲೂ ಪಾವಗಡ ರಸ್ತೆಯ ರೈಲ್ವೇ ಸ್ಟೇಷನ್ ಸಮೀಪದ ಸರ್ಕಾರಿ ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸುತ್ತಿದ್ದಾರೆ ..

ಆದರೇ ಸದರೀ ಜಾಗದಲ್ಲಿ ಒಂದರ ಮೇಲೆ ಇನ್ನೊಂದರಂತೆ ಹಳೆಯ ಶವದ ಮಣ್ಣಿನ ಗುಡ್ಡೆಗಳನ್ನು ಮೇಲಿಂದ ಮೇಲೆ ಗುಂಡಿ ತೋಡಿ ಅದೇ ಜಾಗದಲ್ಲಿ ಶವಸಂಸ್ಕಾರ ನಡೆಸುತ್ತಿರುವ ಶೋಚನೀಯ ಸಂಗತಿ.

ಆದ್ದರಿಂದ ತಾಲ್ಲೂಕು ಧಂಡಾಧಿಕಾರಿಗಳಿಗೆ ಮನವರಿಗೆ ಮಾಡಿದ ಅಧ್ಯಕ್ಷೆ ಮಂಜುಳಾ, ನಗರಸಭೆ ಕಛೇರಿ ವ್ಯವಸ್ಥಾಪಕರಾದ ಲಿಂಗರಾಜು, ಕಂದಾಯ ಇಲಾಖೆಯ ನೌಕರರು ಈ ಸಂದರ್ಭದಲ್ಲಿ ಇದ್ದರು.

About The Author

Namma Challakere Local News
error: Content is protected !!