💐”ಸಂಕಷ್ಟಹರ ಗಣಪತಿಯ ಪ್ರಯುಕ್ತ ವಿಶೇಷ ಸತ್ಸಂಗ”.
ಚಳ್ಳಕೆರೆ-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅವರ ಶಿವನಗರದ ಜಿ.ವಿ.ಎಸ್ ನಿವಾಸದಲ್ಲಿ ಸಂಕಷ್ಟಹರ ಗಣಪತಿಯ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮ ನಡೆಯಿತು. ಸಂಕಷ್ಟಹರ ಗಣಪತಿಯ ಬಗ್ಗೆ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಮಾತನಾಡಿದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ”ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಸತ್ಸಂಗದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅನಿತಾ ಯಾದವರೆಡ್ಡಿ, ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕೃಷ್ಣವೇಣಿ, ವೀರಮ್ಮ, ರಶ್ಮಿ ರಮೇಶ್, ರಶ್ಮಿ ವಸಂತ, ಸಂಗೀತ, ಯತೀಶ್ ಎಂ ಸಿದ್ದಾಪುರ, ಜಯಮ್ಮ,ಶಾರದಾಮ್ಮ, ಭ್ರಮರಂಭಾ ಭಾಗವಹಿಸಿದ್ದರು.

