“ರಾಮನಾಮ ಸ್ಮರಣೆಯಿಂದ ಬದುಕಿನಲ್ಲಿ ನೆಮ್ಮದಿ”- ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ-ಸದಾ ರಾಮನಾಮ ಸ್ಮರಣೆಯಿಂದ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ಶಿವನಗರದ ನೂತನ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಸನ್ನಿಧಿಯಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಶ್ರೀರಾಮನ ಬಗ್ಗೆ ವಿಶೇಷ ಪ್ರವಚನ ನೀಡಿದರು.
ರಾಮನಾಮ ತಾರಕ ಮಂತ್ರವಾಗಿದ್ದು ಅದರ ನಿತ್ಯ ಸ್ಮರಣೆ ಮತ್ತು ಚಿಂತನೆಯಿಂದ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ.ಆದ್ದರಿಂದ ಕ್ಷಣಿಕ ಸುಖಕ್ಕಾಗಿ ಆಸೆ ಪಡದೆ ಶಾಶ್ವತ ಸುಖಕ್ಕಾಗಿ ಆತೊರೆಯಬೇಕು.
ಸಾರ್ಥಕ ಬದುಕಿನ ಎಲ್ಲಾ ಮೌಲ್ಯಗಳನ್ನು ರಾಮಾಯಣ ಗ್ರಂಥ ಒಳಗೊಂಡಿದೆ.ಇಂದಿನ ಯುವಪೀಳಿಗೆ ಇಂತಹ ಮಹಾಕಾವ್ಯಗಳನ್ನು ಓದುವ ಮತ್ತು ಶ್ರವಣ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀಲಲಿತಾ ಸಹಸ್ರನಾಮ” ಮತ್ತು “ಶ್ರೀದೇವಿಸ್ತುತಿ”ಪಠಣ, ವಿಶೇಷ ಭಜನೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಟಿ.ಪ್ರಭುದೇವ, ಕುಮಾರ್, ಶ್ರೀಮತಿ ಬಿ.ಸುಮನ ಕೋಟೇಶ್ವರ,ನಯನ ನಾಗರಾಜ್, ಜ್ಯೋತಿ ಸತೀಶ್,ಪುಷ್ಪ ಸಂಜೀವಮೂರ್ತಿ, ಸತ್ಯನಾರಾಯಣ ಗುಪ್ತ,ನಳಿನ ಹರಿಕೃಷ್ಣ, ಜಿ.ಯಶೋಧಾ ಪ್ರಕಾಶ್, ನೇತಾಜಿ ಪ್ರಸನ್ನ,ಜಯಪಾಲ, ಕೆ.ಎಂ ವೇದಾಚಾರ್, ಮೀನಾಕ್ಷಿ ಮಂಜುನಾಥ, ಸರೋಜಮ್ಮ,ಚಂದ್ರಕಲಾ, ಮಾಣಿಕ್ಯಮ್ಮ, ಯತೀಶ್ ಎಂ ಸಿದ್ದಾಪುರ,ಶುಭ ಸೋಮಶೇಖರ್ , ತಿಪ್ಪಮ್ಮ, ಮೋಹಿನಿ, ವನಜಾಕ್ಷಿ ,ಅಂಬುಜಾ ಶಾಂತಕುಮಾರ್, ಗೀತಾ ನಾಗರಾಜ್,ಮಂಜುಳಮ್ಮ, ಗೀತಾ ವೆಂಕಟೇಶರೆಡ್ಡಿ, ಚೇತನ್ ಟಿ.ಎಂ.ವಿಜಯಕಲಾ, ಲಕ್ಷ್ಮೀದೇವಮ್ಮ, ಚೇತನ್, ರಶ್ಮಿ ರಮೇಶ್, ಲೀಲಾವತಿ ಸೇರಿದಂತೆ ಶ್ರೀಶಾರದಾಶ್ರಮ ಮತ್ತು ಶ್ರೀಮಹಾಲಕ್ಷ್ಮೀ ದೇವಸ್ಥಾನದ ಸದ್ಭಕ್ತರು ಭಾಗವಹಿಸಿದ್ದರು.

