ಚಳ್ಳಕೆರೆ : 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ನಗರಸಭೆ ಸಹಯೋಗದೊಂದಿಗೆ ಆಚರಿಸುವಂತಹ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಂದ ನೃತ್ಯರೂಪಕ ಪ್ರದರ್ಶನವನ್ನು ಈ ಬಾರಿ ವಿಶೇಷವಾಗಿ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್.ಸುರೇಶ್ ಮಾಧ್ಯಮದೊಂದಿಗೆ ಮಾಹಿತಿ ಅಂಚಿಕೊಂಡರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲೆ ಆವರಣದಲ್ಲಿ ಆಗಸ್ಟ್ 15ರಂದು ನಡೆಯುವ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 1000 ವಿದ್ಯಾರ್ಥಿಗಳಿಂದ ರೂಪಗೊಂಡ ನೃತ್ಯರೂಪಕ ಗೀತೆಗೆ ತಾಲಿಮು ನಡೆಸುತ್ತಿರುವಂತಹ ವಿದ್ಯಾರ್ಥಿಗಳೊಂದಿಗೆ ನೃತ್ಯ ವೀಕ್ಷಿಸಿ ಮಾತನಾಡಿದರು,
ಇನ್ನು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತಹ ಮಹಾನೀಯರನ್ನು ನೆನೆಯುತ್ತ ನೃತ್ಯ ರೂಪಕದ ಮೂಲಕ ಈ ವರ್ಷದ ಸುಮಾರು ಆರು ಶಾಲೆಗಳ ಮೂಲಕ 19 ವಿದ್ಯಾರ್ಥಿಗಳೊಂದಿಗೆ ನೃತ್ಯರೂಪಕ ಗೀತೆಯನ್ನು ವಿಶೇಷವಾಗಿ ಈ ಬಾರಿ ಏರ್ಪಡಿಸಲಾಗಿದೆ, ಮಕ್ಕಳೊಂದಿಗೆ ಸಾಂಸ್ಕೃತಿಕ ನೃತ್ಯ, ಹಾಗೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರಿಂದ ಸ್ವಾತಂತ್ರ ದಿನಾಚರಣೆ ಭಾಷಣ ಹೀಗೆ ನಾಳೆ ನಡೆಯುವಂತ 79ನೇ ಸ್ವಾತಂತ್ರ್ಯ ದಿನಾಚರಣೆ ವಿಶೇಷತೆಗಳಿಂದ ಕೂಡಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸ್ವಾಮಿ, ಹಾಗೂ ಇತರ ಶಾಲಾ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.


