ಚಳ್ಳಕೆರೆ : ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಕರ್ತವ್ಯ ನಿರ್ವಹಿಸುವ
ಗಣತಿದಾರರಿಗೆ ತಮ್ಮ ತಮ್ಮ ಸ್ಥಳದಲ್ಲಿ ಮಾರ್ಪಾಡು ಮಾಡುವಂತೆ ಸರಕಾರಿ ನೌಕರ ಸಂಘದಿಂದ ಶಿಕ್ಷಕರು ಇಂದು ತಹಶಿಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂದೆ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘಟನೆಯ ಪದಾಧಿಕಾರಿಗಳು, ಹಾಗೂ ಶಿಕ್ಷಕರು ಪ್ರತಿಭಟನೆ ನಡೆಸಿ ಮಾತನಾಡಿದ ನೌಕರ ಸಂಘದ ತಾಲೂಕು ಅಧ್ಯಕ್ಷ ಸಿಟಿ.ವಿರೇಶ್ ,
ಸರ್ಕಾರದ ಆದೇಶದಂತೆ ಹಿಂದುಳಿದ ವರ್ಗದ ಜನಗಣತಿ ಮಾಡುತ್ತಿರುವುದು ಸರಿಯಷ್ಟೆ ಆದರೆ ಶಿಕ್ಷಕರನ್ನು
ಆಯೋಜಿಸಲಾಗಿರುವ ಸ್ಥಳ, ತಮ್ಮ ಶಿಕ್ಷಕ ವೃತ್ತಿ ನಿರ್ವಹಿಸುವ ವ್ಯಾಪ್ತಿಯಲ್ಲಿ ನೀಡಿದರೆ, ಅನುಕೂಲ ವಾಗುತ್ತದೆ, ಇಲ್ಲವಾದರೆ ಓಟಿಪಿ, ಕೆಲ ದಾಖಲಾತಿಗಳ ಪುರಾವೆ ನೀಡುವಲ್ಲಿ ಗ್ರಾಮೀಣ ಪ್ರದೇಶದ ಮುಗ್ದ ಜನರು ಅನುಮಾನದ ರೀತಿಯಲ್ಲಿ ಕಾಣುತ್ತಾರೆ, ಇದರಿಂದ ಸಮಿಕ್ಷೆ ಕಾರ್ಯ ಸುಗಮವಾಗಿ ಜರುಗಲು ಹಿನ್ನಡೆಯಾಗುತ್ತದೆ, ಆದ್ದರಿಂದ
ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಂಡಿದ್ದು, ಈ ಸಮೀಕ್ಷೆಯನ್ನು
ಯಶಸ್ವಿಯಾಗಿ ಮಾಡಿಕೊಡಲು ಗಣತಿದಾರರಿಗೆ ತಮ್ಮ ತಮ್ಮ ಸ್ಥಳದಲ್ಲಿಯೇ ಸಮೀಕ್ಷೆ ಕಾರ್ಯ
ಯಶಸ್ವಿಯಾಗಿ ಮಾಡಿಕೊಡಲು ಅನುಕೂಲ ಮಾಡಿಕೊಡುವುದು ಎಂದರು.

ಇದೇ ಸಂಧರ್ಭದಲ್ಲಿ ಜಂಟಿ ಕಾರ್ಯದರ್ಶಿ ಹೆಚ್.ಹನುಮಂತಪ್ಪ ಮಾತನಾಡಿ, ಗಣತೀದಾರರಿಗೆ ಪೂರ್ಣ ಪ್ರಮಾಣದ ಕಿಟ್ ಒದಗಿಸುವುದು. ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ / ಮೇಲ್ವಿಚಾರಕರಿಗೆ ಗಳಿಕೆ ರಜೆ
ಮಂಜೂರು ಮಾಡಿಕೊಡುವುದು. ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ & ಹಾಗೂ ಸರ್ವರ್ ವೇಗವನ್ನು
ಹೆಚ್ಚಿಸುವುದು ಎಂದು ಮನವಿ ನೀಡಿದ್ದಾರೆ.

ಇದೇ ಸಂಧರ್ಭದಲ್ಲಿ
ತಾಲೂಕು ಸರಕಾರಿ ನೌಕರ ಸಂಘದ ಅದ್ಯಕ್ಷ ಸಿಟಿ.ವಿರೇಶ್, ಉಪಾಧ್ಯಕ್ಷ ರಾಜಣ್ಣ ಹೆಚ್.ಓ.
ಸಂಘಟನಾ ಕಾರ್ಯದರ್ಶಿ‌ ಹನುಮಂತಪ್ಪ ಸಿ., ಜಂಟಿ ಕಾರ್ಯದರ್ಶಿ ಹೆಚ್.ಹನುಮಂತಪ್ಪ.
ಜಯಮ್ಮ, ಚೆನ್ನಕೇಶವ, ಜೆ.ಶಾಂತಕುಮಾರಿ, ಪಿಎನ್.ಪ್ರಸನ್ನ , ಕೊಟ್ರಪ್ಪ, ಗಣತಿದಾರರು, ಮೇಲ್ವಿಚಾರಕರು‌, ಇತರರು ಹಾಜರಿದ್ದರು.

About The Author

Namma Challakere Local News
error: Content is protected !!