ಚಳ್ಳಕೆರೆ : ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬಾರದು, ಆದ್ದರಿಂದ ಶೈಕ್ಷಣಿಕವಾಗಿ ಅವರಿಗೆ ಚಿಕ್ಕವಯಸ್ಸಿನಲ್ಲೇ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು, ದಿನ ನಿತ್ಯ ನಗರ ಸ್ವಚ್ಚತೆ ಮಾಡುವ ಕಾರ್ಮಿಕರ ಶ್ರಮ ಅನನ್ಯ, ಕಡುಬಡತನದಿಂದ ಬಂದ ಪೌರಕಾರ್ಮಿಕರು ತಮ್ಮ ಜೀವ ಪಣಕಿಟ್ಟು ನಗರದ ಜನತೆಗೆ ಸ್ವಚ್ಛ ಪರಿಸರವನ್ನಾಗಿ ಮಾಡುತ್ತಾರೆ, ರಾಜಕಾರಣಿ ಮಕ್ಕಳು ರಾಜಕೀಯ ಮಾಡುತ್ತಾರೆ, ಶಾಸಕರು, ಸಚಿವರು, ಮಂತ್ರಿಯಾಗಬೇಕೆನ್ನುವ ಅಸೆ , ಅಧಿಕಾರಿಗಳ ಮಕ್ಕಳು ತಮಗಿಂತ ಉನ್ನತ ಮಟ್ಟದ ಅಧಿಕಾರಿಯಾಗಲಿ ಎನ್ನುವ ಆಸೆ ಆದರೆ ತಾವು ಮಾಡುವ ಕಾಯಕ ನಮ್ಮಮಗ ಮಾಡದಿರಲಿ ಎನ್ನುವ ವೃತ್ತಿ ಪೌರಕಾರ್ಮಿಕರ ವೃತ್ತಿ ಆದ್ದರಿಂದ ಉತ್ತಮ ಶಿಕ್ಷಣ ನೀಡಿ, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನವಿರಲಿ, ದುಷ್ಚಟಗಳಿಂದ ದೂರವಿರಿ, ನಿಮಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಿ ಎಂದರು.
ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿ ಮಾತನಾಡಿ, ಕಾಯಕಯೋಗಿಯ ನೆಲೆಗಟ್ಟಿನಲ್ಲಿ ನಗರದ ಕಸವನ್ನು ಸ್ವಚ್ಚ ಮಾಡುವ ಕಾರ್ಮಿಕರ ಶ್ರಮ ನಿಜಕ್ಕೂ ಅಪಾರವಾದದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ಮಾತ್ರ ಈ ಕೆಲಸವನ್ನು ಅಯ್ಕೆ ಮಾಡಿಕೊಳ್ಳುತ್ತಾರೆ, ನಿಮ್ಮ ಗೆ ಸಿಗುವ ಸೌಲಭ್ಯಗಳ ಜೊತೆಗೆ ನಗರಸಭೆ ಯಿಂದ ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮುಖೇನ ಮುಖ್ಯವಾಹಿನಿಗೆ ತರಲು ಪ್ರೇರೆಪಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ಪೌರಾಯುಕ್ತ ಜಗರೆಡ್ಡಿ ಮಾತನಾಡಿ,
ದಿನ ಬೆಳಾಗಾದರೆ ನಗರದ ಸ್ವಚ್ಚತೆಗೆ ಮುಂದಾಗುವ ಪೌರಕಾರ್ಮಿಕರ ಸೇವೆ ಅನನ್ಯ,ಇವರ ಕಾಯಕ ಪ್ರಾರಂಭವಾಗುವುದೇ ಸ್ವಚ್ಛತೆಯೊಂದಿಗೆ, ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಇವರಿಗೆ ಸದಾ ಸಿಗುವಂತೆ ಮಾಡಿ ವಸತಿ ರಹಿತ ಪೌರಕಾರ್ಮಿಕರ ಕುಟುಂಬಕ್ಕೆ ಸು.31 ಜನ ಪೌರಕಾರ್ಮಿಕರಿಗೆ ವಸತಿ ಯೋಜನೆ ಕಲ್ಪಿಸಲಾಗಿದೆ, ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, ಸದಸ್ಯ ರಮೇಶ್ ಗೌಡ, ಕೆ.ವೀರಭದ್ರಪ್ಪ, ರಾಘವೇಂದ್ರ, ಕವಿತಾ, ಸುಜಾತ, ಸುಮಾ, ವೆಂಕಟೇಶ್, ಶ್ರೀನಿವಾಸ್, ನಾಮ ನಿರ್ದೇಶನ ಸದಸ್ಯ ಹಳೆನಗರದ ವೀರಭದ್ರಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಪೌರಕಾರ್ಮಿಕರು ಇತರರು ಪಾಲ್ಗೊಂಡಿದ್ದರು.

