ಚಳ್ಳಕೆರೆ :
ಚಿತ್ರದುರ್ಗ: ಸುಳ್ಳು ಹಾಗೂ ಊಹೆ ಮಾಧ್ಯಮ ಕ್ಷೇತ್ರಕ್ಕೆ
ಹಾನಿ
ಸುಳ್ಳು ಹಾಗೂ ಊಹಾ ಪತ್ರಿಕೋದ್ಯಮದಿಂದ ಪತ್ರಕರ್ತರು
ಇಂದು ಗಾಳಿ ಸುದ್ದಿಗಳಿಗೆ ಗವಾಕ್ಷಗಳಾಗುತ್ತಿದ್ದಾರೆ.
ಎಂದು ಸಿಎಂ
ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಿತ್ರದುರ್ಗದಲ್ಲಿ
ಸೋಮವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತಾಡಿ,
ಊಹಾ ಪತ್ರಿಕೋದ್ಯಮ ಎಂದರೆ, ಸುದ್ದಿ ಬೇಕಾಬಿಟ್ಟಿ ಬರೆದು
ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಪತ್ರಕರ್ತರು ಗಾಳಿ ಸುದ್ದಿಗೆ
ಗವಾಕ್ಷಗಳಾಗದೇ, ಸತ್ಯಕ್ಕೆ ಕಿಟಕಿಯಾಗಬೇಕೆಂದರು.

