ಇನ್ನೂ
ಗ್ರಾಮ ಪಂಚಾಯತಿಯಲ್ಲಿ ನಕಲಿ ಬಿಲ್ಲು ಸೃಷ್ಟಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಓಗಳು , 2024 -25 ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ, ಜನರ ತೆರಿಗೆ ಹಣ ವಂಚಿಸಿರುವ ಬಗ್ಗೆ ಆರೋಪ ಪ್ರತ್ಯಾರೂಪಗಳನ್ನು ತನಿಖೆ ಮಾಡಲು ತಾಲೂಕು ಮಟ್ಟದ ಸತ್ಯಶೋಧನಾ ಸಮಿತಿ ರಚಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ .
ಸತ್ಯ ಸಂಶೋಧನಾ ಸಮಿತಿ ರಚಿಸಿ, ಚಿಕ್ಕ ಹಳ್ಳಿ, ಬಂಜಿಗೆರೆ ಬೇಡ ರೆಡ್ಡಿಹಳ್ಳಿ ಗ್ರಾಮಗಳಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಹಣ ಬಿಡುಗಡೆ ಮಾಡಬೇಕು ಅಲ್ಲಿಯ ತನಕ 15ನೇ ಹಣಕಾಸು ಯೋಜನೆ ಗ್ರಾಮ ಪಂಚಾಯಿತಿಯ ಬ್ಯಾಂಕ್ ಖಾತೆಯನ್ನು ಹಣ ಡ್ರಾ ಮಾಡದಂತೆ ನಿರ್ಬಂಧಿಸಬೇಕೆಂದು ಮನವಿ ಮಾಡಿದರು .
ಕಾಮಗಾರಿಯ ಹಣ ಡ್ರಾ ಮಾಡಲು ನಕಲಿ ಬಿಲ್ ಸೃಷ್ಟಿಸಿ ಗ್ರಾಮ ಪಂಚಾಯತಿಯಲ್ಲಿ ಹಣ ಬಿಡುಗಡೆ ಮಾಡಿರುವಂತಹ ಆರೋಪಗಳು ಕೇಳಿ ಬಂದಿವೆ, ಗ್ರಾಮದಲ್ಲಿ ಸ್ವಚ್ಛತೆ ಬೀದಿ ದೀಪಗಳು ಚರಂಡಿ ಹೀಗೆ ಕಾಮಗಾರಿ ಮಾಡದೆ, ನಕಲಿ ಬಿಲ್ ಸೃಷ್ಟಿಸಿದ್ದಾರೆ ಎಂದು ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಶೇಖರ್, ಮಲಸಮುದ್ರ ಗಂಗಾಧರ ,ಮರ್ಲಹಳ್ಳಿ ರವಿಕುಮಾರ್, ಹಿರೇಹಳ್ಳಿ ತಿಪ್ಪೇಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.

