ಚಳ್ಳಕೆರೆ :
2024-25 ನೇ ಸಾಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಚಳ್ಳಕೆರೆ ಸರಕಾರಿ ತಾಂತ್ರಿಕ ವಿದ್ಯಾಲಯಕ್ಕೆ ಚಿನ್ನದ ಗರಿ ಲಭಿಸಿದೆ.
ಚಿನ್ನದ ಪದಕ ಹಾಗೂ ಉನ್ನತ ಶ್ರೇಣಿ
ಪಡೆದ
ವಿದ್ಯಾರ್ಥಿಗಳ ಪಟ್ಟಿಯನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದೆ.
ಇದೇ
ಮೊಟ್ಟಮೊದಲ ಬಾರಿಗೆ ಸಂಸ್ಥೆಗೆ ಆಟೋಮೊಬೈಲ್ ವಿಭಾಗದ ವಿದ್ಯಾರ್ಥಿನಿ ಚಿನ್ನದ ಪದಕ ದೊಂದಿಗೆ ಮೊದಲ ಉನ್ನತ ಶ್ರೇಣಿಯ
ಪಡೆದದಲ್ಲದೆ ಇಬ್ಬರು ವಿದ್ಯಾರ್ಥಿಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ rank ಪಡೆಯುವ ಮೂಲಕ ಕಾಲೇಜು ಹಾಗೂ
ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Rank ವಿಜೇತರನ್ನು ಶಾಸಕ ಟಿ ರಘುಮೂರ್ತಿಯವರು ಹಾಗೂ ಪ್ರಾಂಶುಪಾಲರಾದ ಎಂ ಎಂ
ಬೆನಾಳ ಅವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಕರ್ನಾಟಕ ಸರ್ಕಾರ
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಇಂಜಿನೀಯರಿಂಗ್ ಕಾಲೇಜು, ಚಳ್ಳಕೆರೆ ಕಾಲೇಜ್ ನಲ್ಲಿ 2021 ರಲ್ಲಿ ಮೂರು ಬ್ರಾಂಚ್ ಗಳೊಂದಿಗೆ ಶಾಸಕರಾದ ಟಿ ರಘುಮೂರ್ತಿಯವರ ಸಮ್ಮುಖದಲ್ಲಿ
ಪ್ರಾರಂಭವಾಗಿತ್ತು ಎನ್ನಲಾಗಿದೆ.

