ಚಳ್ಳಕೆರೆ :
ಚಿತ್ರದುರ್ಗ: ಶಾಸಕ ಬಿಪಿ ಹರೀಶ್ ಬಂಧಿಸಿ
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್‌ರನ್ನು ಅವಾಚ್ಯ ಶಬ್ದಗಳಿಂದ
ನಿಂದಿಸಿದ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ರನ್ನು ಕೂಡಲೇ
ಬಂಧಿಸಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.
ಶಿವಕುಮಾರ್ ನೇತೃತ್ವದಲ್ಲಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ
ನಡೆಸಲಾಯಿತು.
ಶಾಸಕ ಹರೀಶ್ ಮಹಿಳೆಯರಿಗೆ ಗೌರವ ನೀಡದೆ
ನಿಂದಿಸಿದ್ದಾರೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ
ಉಂಟು ಮಾಡುತ್ತವೆ. ಆದ್ದರಿಂದ ಇಂತಹವರನ್ನು ಬಂಧಿಸಬೇಕೆಂದು
ಪ್ರತಿಭಟನಾಕಾರರು ಒತ್ತಾಯಿಸಿದರು.

