ಚಳ್ಳಕೆರೆ:

ಇಂದಿನ ಸಮಾಜದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಮತ್ತು ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಅವರು ಮೊಣಕಾಲ್ಮುರಿನ ನೋಬೆಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಬಹುತೇಕ ಶಿಕ್ಷಕರ ಬೋಧನೆ ಪುಸ್ತಕಕ್ಕೆ ಸೀಮಿತವಾಗದೆ ಹೃದಯ ಸ್ಪರ್ಶಿಯಾಗಿರುತ್ತದೆ ಇದರ ಜೊತೆಗೆ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣದ ಒತ್ತನ್ನು ಪೋಷಕರು ನೀಡಬೇಕಾಗುತ್ತದೆ ಜಾಗತಿಕ ಮಟ್ಟದ ಸ್ಪರ್ಧೆಗೆ ಇಂಗ್ಲಿಷ್ ಅನಿವಾರ್ಯವಾದರೂ ಕನ್ನಡ ಭಾಷಾ ಸಂಪತ್ತನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಶಿಕ್ಷಕರಿಂದಾಗಬೇಕು ಮನುಕುಲಕ್ಕೆ ಜೀವಾತ್ಕರ್ಷವನ್ನು ನೀಡಬೇಕಾಗಿರುವ ಅಂತಹ ಮಂಕುತಿಮ್ಮನ ಕಗ್ಗ ಬಸವಣ್ಣನ ವಚನಗಳು ಮತ್ತು ಅಂಬೇಡ್ಕರ್ ಅವರ ಸಂದೇಶಗಳನ್ನು ಪ್ರತಿ ಮಗುವಿಗೆ ಪೋಷಕರು ಪರಿಚಯಿಸಬೇಕು, ಮತ್ತು ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ ದಿನಗಳಲ್ಲಿ ಮಕ್ಕಳು ಅಣಿ ಯಾಗಬೇಕಾದರೆ ಈಗಿನಿಂದಲೇ ಇದಕ್ಕೆ ಪೂರಕವಾಗುವಂತಹ ಪಠ್ಯಗಳು ಮತ್ತು ಇವುಗಳ ಅರಿವನ್ನು ಮಕ್ಕಳಿಗೆ ಪರಿಚಯಿಸಿ ಉತ್ಸಾಹ ತುಂಬಬೇಕೆಂದು ಮನವಿ ಮಾಡಿದರು.

ನಿವೃತ್ತ ಶಿಕ್ಷಕರಾದಂತಹ ಶಾಂತವೀರಪ್ಪ ಮಾತನಾಡಿ ಮಹನೀಯರುಗಳ ಜೀವನ ದರ್ಶನವನ್ನು ಮತ್ತು ಸಂದೇಶಗಳನ್ನು ಶಿಕ್ಷಕರುಗಳು ಮಕ್ಕಳಿಗೆ ಪರಿಚಿಸಬೇಕು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ತುಂಬಾ ಪ್ರಾಯಸದ ಕೆಲಸ ಆದರೆ ಇದೊಂದು ಅದ್ಭುತವಾದ ಸಮಾಜ ಸೇವೆಯಾಗಿರುವುದರಿಂದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಧೃತಿಗೆಡಬಾರದು ಐವತ್ತು ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಗಳು ಇಂದು 10,000 ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ ಇರುವಂತಹ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಂಡು ಹಿಂದುಳಿದಂತ ಇಂತಹ ತಾಲೂಕುಗಳ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸ್ಪರ್ಧೆಗೆ ಅಣಿಗೊಳಿಸುವ ಕೆಲಸ ಈ ಶಾಲೆಯ ಶಿಕ್ಷಕರುಗಳಿಂದಾಗಲಿ ಎಂದು ಆಶಿಸಿದರು

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲಲಿತಮ್ಮ ಸದಸ್ಯರಾದಂತಹ ರೂಪ, ಡಾಕ್ಟರ್ ಮಂಜುನಾಥ್, ಆರಕ್ಷಕ ಉಪನಿರೀಕ್ಷಕರದ ಪಾಂಡುರಂಗ ಶಿಕ್ಷಣ ಸಂಸ್ಥೆಯ ಪ್ರಭು, ಮಂಜುನಾಥ್, ಹಾಲೇಶ್, ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!