ಚಳ್ಳಕೆರೆ :
ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಯು ಆಗಸ್ಟ್ 26ರಂದು ನಡೆಯಲಿದ್ದು ಶಾಸಕರು ಮತ್ತು ಜಿಲ್ಲಾಡಳಿತವು ಪಿ ಡಬ್ಲ್ಯೂ ಡಿ ಇಲಾಖೆಗೆ ಭಕ್ತಾದಿಗಳು ಆಗಮಿಸುವ ರಸ್ತೆಗಳು ದುರಸ್ತಿ ಆಗಿರುವುದರಿಂದ ರಿಪೇರಿ ಮಾಡಲು ಸೂಚಿಸಿದ್ದರು ಸಹ ಇಲ್ಲಿಯವರೆಗೂ ಇಲಾಖೆ ಯಾವುದೇ ಅಧಿಕಾರಿಗಳು ಭೇಟಿ ನೀಡದೆ ಸಂಪೂರ್ಣವಾಗಿ ನಿರ್ಲಕ್ಷಣೆ ಮಾಡಿದರೆ ರಸ್ತೆಗಳಲ್ಲಿ ಅಪಘಾತಗಳು ಅಥವಾ ಭಕ್ತಾದಿಗಳಿಗೆ ಪ್ರಾಣಿ ಹಾನಿ ಉಂಟಾದಲ್ಲಿ ಸಂಪೂರ್ಣವಾಗಿ ಪಿಡಬ್ಲ್ಯೂಡಿ ಇಲಾಖೆಯ ನೇರ ಹೊಣೆ ಎಂದು ಗ್ರಾಮ ಪಂಚಾಯತಿ ಸದಸ್ಯ ಶಶಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಎರಡನೇ ಅತೀದೊಡ್ಡ ಜಾತ್ರೆ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಹೊರ ರಾಜ್ಯದ ಭಕ್ತರು ಆಗಮಿಸುತ್ತಾರೆ ಆದರೆ ಸರಿಯಾದ ರಸ್ತೆಯ ಇಲ್ಲದೆ ಭಕ್ತರಿಗೆ ತೊಂದರೆ ಹಾಗಬಾರದು, ಇದಕ್ಕೆ ನೇರ ಹೊಣೆ ಇಲಾಖೆಯವರೆ ಹೊರಬೇಕು ಎಂದು ಆರೋಪಿಸಿದ್ದಾರೆ.
ದೇವಸ್ಥಾನಕ್ಕೆ ಆಗಮಿಸುವ ಮುಖ್ಯ ರಸ್ತೆಯೇ ಈ ದುಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.

