ಚಳ್ಳಕೆರೆ :
ಮಕರ ಸಂಕ್ರಾಂತಿ ಹಬ್ಬ ಸುಗ್ಗಿಯ ಹಬ್ಬ, ಹೊಸ ಚೈತನ್ಯ, ಬೆಳವಣಿಗೆ, ಬಿತ್ತನೆಯ ಉಗಮ ಕಾಲದ ಸಂಕೇತ ಇಂತಹ ಸಂಭ್ರಮ ಕಾಲ ಸಂಕ್ರಾಂತಿ ಹಬ್ಬ ಎನ್ನಲಾಗಿದೆ.

ಅದರಂತೆ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಶಿವನಗರದಲ್ಲಿ ಶ್ರೀ ಶಿವನಗರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಮಕರ ಸಂಕ್ರಾಂತಿ” ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

ನಶಿಸಿಹೋಗುತ್ತಿರುವ ಸಂಪ್ರದಾಯಗಳ ಮಧ್ಯೆ ಶಿವನಗರದ ಉದ್ಯಾಯನ ವನದಲ್ಲಿ ಮಹಿಳೆಯರು 2026 ರ ಮಕರ ಸಂಕ್ರಾಂತಿ ಹಬ್ಬವನ್ನು ಸಂಪ್ರದಾಯ ಬದ್ದವಾಗಿ ಸುಗ್ಗಿಯ ಹಿಗ್ಗುತರುವ ಸಂಕ್ರಾಂತಿಗೆ ನಗರದ ಮಹಿಳಾ ಮಣೆಯರು ಹೆಜ್ಜೆ ಹಾಕುವ ಮೂಲಕ ನೂತನ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ.

ಅದರಂತೆ ಶಿವನಗರ ಸಂಘದ
ಅಧ್ಯಕ್ಷರಾದ ಕೆ ಪಿ ನಾಗಭೂಷಣ ಶೆಟ್ಟಿ,
ಉಪಾಧ್ಯಕ್ಷರು, ಟಿ ಕೊಟ್ರೇಶ್
ಕಾರ್ಯದರ್ಶಿ, ಕೆ. ಸಿ. ವೀರೇಶ
ಶಿವನಗರದ ಸಲಹಾ ಸಮಿತಿ ಸದಸ್ಯರು, ಕಾರ್ಯಕಾರಿ ಸಮಿತಿ, ನಿರ್ದೇಶಕರು, ಶಿವನಗರ ಮಹಿಳಾ ಸಂಘದವರು ಹಾಗೂ ಶಿವನಗರದ ನಿವಾಸಿಗಳು ಎಲ್ಲಾರೂ ಸೇರಿ ಹಬ್ಬವನ್ನು ಆಚರಿಸಿದರು.

About The Author

Namma Challakere Local News
error: Content is protected !!