ಬೀದಿ ದೀಪ, ರಸ್ತೆ ಅಗಲೀಕರಣ, ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ : ಗ್ರಾಪಂ.ಅಧ್ಯಕ್ಷ ಓಬಣ್ಣ
ಚಳ್ಳಕೆರೆ : ಮಧ್ಯ ಕರ್ನಾಟಕ ಭಾಗದ ಆರಾಧ್ಯದೈವಿ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ
ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ ಹೇಳಿದರು.
ಅವರು ನಗರದ ಗೌರಸಮುದ್ರ ಗ್ರಾಮದ ಜಾತ್ರೆ ನಡೆಯುವ ತುಮುಲು ಪ್ರದೇಶದಲ್ಲಿ ಅಧಿಕಾರಿಗಳೊಟ್ಟಿಗೆ ಸ್ಥಳ ಪರೀಶಿಲನೆ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ವತಿಯಿಂದ ಬೀದಿ ದೀಪ, ಚರಂಡಿ ಸ್ವಚ್ಚತೆ, ರಸ್ತೆ ಅಗಲೀಕರಣ, ತುಮುಲು ಪ್ರದೇಶದ ಸ್ವಚ್ಚತೆ, ಹಾಗೂ ಜಾತ್ರೆಗೆ ಬರುವ ಭಕ್ತರಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ , ಜನದಟ್ಟಣೆಯ ನಿಯಂತ್ರಣಕ್ಕೆ ಬ್ಯಾರಿಕೆ ಅಳವಡಿಕೆ ಈಗೇ ಸಕಲ ಸೌಲಭ್ಯಗಳನ್ನು ತಾಲೂಕು ಆಡಳಿತದೊಂದಿಗೆ ಗ್ರಾಮ ಪಂಚಾಯತಿ ಕೈಜೋಡಿಸಿ ಜಾತ್ರೆ ಯಶಸ್ವಿಗೆ ಕಾರಣವಾಗಬೇಕಿದೆ, ಇನ್ನೂ ಪ್ರತಿವರ್ಷಕ್ಕಿಂತ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ, ಆದ್ದರಿಂದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಪೋಲಿಸ್ ರ ಸಹಕಾರ ಮುಖ್ಯವಾಗುತ್ತದೆ, ಒಟ್ಟಾರೆ ಶಾಸಕರ ಮಾರ್ಗದರ್ಶನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸಗಳನ್ನು ಮಾಡಬೇಕಿದೆ ಎಂದರು.
ಇನ್ನೂ ಸ್ಥಳ ಪರಿಶೀಲನೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ
ತಹಶಿಲ್ದಾರ್ ರೇಹಾನ್, ಡಿವೈಎಸ್ ಪಿ ಬಿಟಿ.ರಾಜಣ್ಣ, ಸಿಪಿಐ ಹನುಮಂತಪ್ಪ ಸಿರೇಹಳ್ಳಿ, ಪಿಎಸ್ಐ ,ಪೋಲಿಸ್ ಸಿಬ್ಬಂದಿ ವರ್ಗ, ಕುಡಿಯುವ ನೀರು ಇಲಾಖೆ ಅಧಿಕಾರಿಗಳು, ಪಿಎಡ್ಲು ಇಲಾಖೆ ಅಧಿಕಾರಿಗಳು, ತಾಪಂ.ಕಾರ್ಯನಿರ್ವಾಹ ಅಧಿಕಾರಿಗಳು ,ಪಿಡಿಓ ಈಗೇ ಎಲ್ಲಾ ಹಂತದ ಅಧಿಕಾರಿಗಳು ಮುಖಂ ಸ್ಥಳದಲ್ಲಿ ಪಾಲ್ಗೊಂಡಿದ್ದರು.

