ಚಳ್ಳಕೆರೆ : ತಳಕು ಪೊಲೀಸರಿಂದ ಅಂತರ್ ರಾಜ್ಯ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ,

ಗಡಿ ಭಾಗದ ಹಂಚಿಕೊಂಡ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ
4,20,000/- ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ 2000/- ರ ಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದೆ.

ಹೊನ್ನೂರು ಗ್ರಾಮದ ವಾಸಿ ಧನಂಜಯ ರೆಡ್ಡಿಯವರ ಮನೆಯ ಬಾಗಿಲಿನ ಇಂಟರ್ ಲಾಕ್ ಮುರಿದು ಬೀರುವಿನವಿನಲ್ಲಿದ್ದ ಸು. 5000/- ರೂ ನಗದು ಹಣ ಮತ್ತು 40,000/- ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಇದರ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಖಾಕಿಪಡೆ ಕಳೆದ ಹತ್ತು ದಿನಗಳಲ್ಲಿ ಕಳ್ಳನನ್ನು ಪತ್ತೆಹಚ್ಚಿದ್ದಾರೆ.

ಆರೋಪಿತರ ಪತ್ತೆಗಾಗಿ ಪೊಲೀಸ್ ಅಧಿಕ್ಷಕರವರಾದ ರಂಜಿತ್ ಕುಮಾರ ಭಂಡಾರು, ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಆರ್ ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಸತ್ಯನಾರಾಯಣ ರಾವ್ ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ ಉಪವಿಭಾಗ ರವರ ನಿರ್ದೇಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ಹನುಮಂತಪ್ಪ ಎಂ ಶಿರೀಹಳ್ಳಿ ರವರ ನೇತೃತ್ವದಲ್ಲಿ ಪಿ.ಎಸ್.ಐ ಶಿವಕುಮಾರ ಕೆ, ಪ್ರೋ.ಪಿ.ಎಸ್.ಐ ಚೇತನ್, ಎ.ಎಸ್.ಐ ಮಂಜಣ್ಣ ಹಾಗೂ ಸಿಬ್ಬಂದಿಗಳಾದ ನಿತಿನ್ ಕುಮಾರ್, ಜಾಕೀರ್ ಹುಸೇನ್, ಮಂಜುನಾಥ, ಧನಂಜಯ, ಜಗದೀಶ್, ವೀರೇಶ, ಮಾರೇಶ್ ಮತ್ತು ಪರಶುರಾಂಪುರ ಠಾಣೆಯ ಪಿ.ಎಸ್.ಐ ಮಾರುತಿ ಹಾಗೂ ಸಿಬ್ಬಂದಿಗಳಾದ ಏಕಾಂತರೆಡ್ಡಿ, ಮಂಜುನಾಥ ಮುಡಕೆ ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಿ ಪತ್ತೆಗೆ ನೇಮಿಸಿದ್ದು, ಸದರಿ ತಂಡವು ಆರೋಪಿಯಾದ ಶೇಖ್ ಖಾಜಾಪೀರ್ , ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಳಕು ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸು. 70,000/- ಬೆಲೆಬಾಳುವ ಬಂಗಾರದ ಆಭರಣಗಳು & 2000/- ರೂ ನಗದು ಹಣ ಹಾಗೂ ಪರಶುರಾಂಪುರ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ
ಸುಮಾರು 3,50,000/- ರೂಪಾಯಿ ಬೆಲೆಬಾಳುವ 27 ಗ್ರಾಂ ಬಂಗಾರದ ನಕ್ಲೇಸನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣ ಬೇಧಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರು, ಡಿವೈಎಸ್ ಸತ್ಯನಾರಾಯಣ ರಾವ್ ಶ್ಲಾಘಿಸಿರುತ್ತಾರೆ.

About The Author

Namma Challakere Local News
error: Content is protected !!