ಮಲ್ಲೂರಹಳ್ಳಿಯಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆ ಇನ್ನೂ ಜೀವಂತ ಗ್ರಾಮದ ಆರಾಧ್ಯ ದೈವ ಶ್ರೀ ಓಬಳದೇವರು ಗಂಗಾ ಪೂಜೆಗೆ ಆಗಮನ.

ಇಂದಿನಿಂದ ಮಲ್ಲೂರಹಳ್ಳಿಯಲ್ಲಿ ಆರು ದಿನಗಳ ಕಾಲ ಗುಗ್ಗರಿ ಹಬ್ಬ ಜಾತ್ರೋತ್ಸವ.

ನಾಯಕನಹಟ್ಟಿ:: ಮಲ್ಲೂರಹಳ್ಳಿ ಗ್ರಾಮದಲ್ಲಿ ಮ್ಯಾಸನಾಯಕರ ಬುಡುಕಟ್ಟು ಸಂಸ್ಕೃತಿಯ ಆಚರಣೆಯಂತೆ ಶುಕ್ರವಾರ
ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಓಬಳದೇವರು ಜಿನಗಿ ಹಳ್ಳಕ್ಕೆ ಗಂಗಾ ಪೂಜೆಗೆ ತೆರಳಿತು.

ಜಾನಪದ ಶೈಲಿಯ ತಮಟೆ ಉರುಮೆ ಸಕಲ ಬಿರುದಾವಳಿಗಳೊಂದಿಗೆ ಅದ್ದೂರಿಯಾಗಿ ಗ್ರಾಮಸ್ಥರು ಗ್ರಾಮದಿಂದ ಶ್ರೀ ಓಬಳದೇವರನ್ನು ಗಂಗಾ ಪೂಜೆಗೆ ಕರೆದೊಯ್ದರು.

ಇನ್ನೂ ಜಿನಿಗಿ ಹಳ್ಳದಲ್ಲಿ ಗಂಗಾ ಪೂಜೆಯನ್ನು ನೆರೆವೇರಿಸಿಕೊಂಡು
ಶ್ರೀಓಬಳದೇವರನ್ನು ಗ್ರಾಮಕ್ಕೆ ಕರೆತರುಲಾಗುತ್ತದೆ ಗ್ರಾಮದ ದಿನಾಂಕ 22/2/2025ನೇ ಶನಿವಾರ ಸಂಜೆ ಶ್ರೀ ಓಬಳದೇವರ ಮಹಾಪೂಜೆ
ಮಲ್ಲೂರಹಳ್ಳಿ ಪ್ರೌಢ ಶಾಲೆಯ ಬಯಲು ಹಸಿರು ಪಾಳೆಯ ಅಂಗಳದಲ್ಲಿ ಜರುಗುವುದು ಓಬಯ್ಯನಹಟ್ಟಿ ಗಿಡ್ಡಾಪುರ ದಾಸಯ್ಯರಿಂದ ಪಂಜುನಗುವ ಕಾರ್ಯಕ್ರಮವಿರುತ್ತದೆ ಹಾಗೂ ಇದೇ ದಿನ ರಾತ್ರಿ ಓಬಳೇಶ್ವರ ಸ್ವಾಮಿ ಸೋಬಾನ ಮಹಿಳಾ ಸಂಘದಿಂದ ಸೋಬಾನ ಕಾರ್ಯಕ್ರಮ.
ದಿನಾಂಕ 23.2.2025 ನೇ ಭಾನುವಾರ ಬೆಳಿಗ್ಗೆ 9 ರಿಂದ 10 ಗಂಟೆಗೆ ಶ್ರೀ ರಾಜರು ದೇವರು ಜಿನಗಿ ಹಳ್ಳಕ್ಕೆ ಗಂಗಾ ಪೂಜೆಗೆ ಹೋಗುವುದು.
24 /2/ 2025ನೇ ಸೋಮವಾರ ಸಂಜೆ ಶ್ರೀ ರಾಜಲುದೇವರು ಮಹಾಪೂಜೆ ನಂತರ ಓಬಯನಹಟ್ಟಿ ಅಣ್ಣ-ತಮ್ಮಂದಿರಿಂದ ಹಾಗೂ ಬಜನಾ ಕಲಾವಿದರಿಂದ ಕಾರ್ಯಕ್ರಮ ಪ್ರೌಢ ಶಾಲಾ ಬಯಲು ಹಸಿರು ಪಾಳಯ ಅಂಗಳದಲ್ಲಿ ಜರುಗುವುದು ದಿನಾಂಕ 25.2.2025ನೇ ಮಂಗಳವಾರ ಆಗಲು ಶ್ರೀದೇವರ ಎತ್ತುಗಳ ಹರಿಯುವುದು ಮತ್ತು ಅನ್ನದಾತೋಹ ಕಾರ್ಯಕ್ರಮ ಇರುತ್ತದೆ.
ದಿನಾಂಕ 26.2.2025ನೇ ಬುಧವಾರ ಮುಂಜಾನೆ ಸೂರ್ಯೋದಯ ಸಮಯದಲ್ಲಿ ಶ್ರೀ ಓಬಳದೇವರು ಮತ್ತು ಶ್ರೀ ರಾಜಲು ದೇವರುಗಳ ವಿಜೃಂಭಣೆಯಿಂದ ಗುಡಿ ತುಂಬುವುದು ನಂತರ ಇದೇ ದಿನ ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಯೋಗದೊಂದಿಗೆ ಜಾತ್ರೆಗೆ ತೆರೆ ಬೀಳುವುದು

ಶನಿವಾರ ಮುಂಜಾನೆ ಮಹಾ ಮಂಗಳಾರತಿ ಮತ್ತು ಮಹಾಪೂಜೆ ಜರಗಲಾಗುತ್ತದೆ ಆದ ಬಳಿಕ ಸಂಘ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜೊತೆಯಲ್ಲಿ ಪಂಜು ನುಂಗುವ ಕಾರ್ಯಕ್ರಮ ನಡೆಯಲಿದೆ. ಬುಧವಾರ ಮುಂಜಾನೆಯ ಸಮಯದಲ್ಲಿ ವಿಜೃಂಭಣೆಯಿಂದ ಗುಡಿ ತುಂಬಲಿದೆ

ಇದೇ ಸಂದರ್ಭದಲ್ಲಿ
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಯಜಮಾನರು ಓ. ಮಂಜುನಾಥ್, ಲೈಸನ್ಸ್ದಾರರು ಜಿ ಮಲ್ಲಿಕಾರ್ಜುನ್, ಗುಂಜಿಗಾರರು ಜಿ.ಯು. ರಾಜೇಶ್ ರೆಡ್ಡಿ, ಹಾಗೂ ಮಲ್ಲೂರಹಳ್ಳಿ ಯಜಮಾನರು ಗೌಡರು ಎಲ್ಲಾ ಗುಡಿಕಟ್ಟಿನ ಅಣ್ಣತಮ್ಮಂದಿರು ಪೂಜಾರಿಗಳು ಧಗಂ ಪೂಜಾರಿಗಳು ಕಿಲಾಡಿಗಳು ಮೇಟಿ ಗೊಂಚಿಗಾರರು ಕೋಮುದಾರರು ಮತ್ತು ಓಬಯ್ಯನಹಟ್ಟಿ ಗೌಡ್ರು ಅಣ್ಣ ತಮ್ಮಂದಿರು ಬಂಧುಗಳು ಹಾಗೂ ಸರ್ವ ಭಕ್ತಾದಿಗಳು ಸಮಸ್ತ ಮಲ್ಲೂರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!