ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಕರ್ಷಕ ಪಥಸಂಚಲನ

ಚಳ್ಳಕೆರೆ: ಜಗತ್ತಿನ ಅತಿದೊಡ್ಡ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ ಎಸ್ ಎಸ್) ಶತಾಬ್ದಿ ನಿಮಿತ್ತ ಚಳ್ಳಕೆರೆ ನಗರದಲ್ಲಿ ಆಯೋಜಿಸಿದ್ದ “ಭವ್ಯ ಪಥಸಂಚಲನ” ಕಾರ್ಯಕ್ರಮದಲ್ಲಿ ಗಣವೇಷ ಸಹಿತ 250 ಕ್ಕೆ ಹೆಚ್ಚು ಆರ್ ಎಸ್ ಎಸ್ ನ ಸ್ವಯಂ ಸೇವಕರು ಭಾಗವಹಿಸಿದ್ದು

ಚಳ್ಳಕೆರೆ ನಗರದ ಗಾಂಧಿನಗರದ ಮುಖ್ಯ ರಸ್ತೆಯಿಂದ ಹೋರಟ ಆಕರ್ಷಕ ಪಥ ಸಂಚಲನ ಗಾಂಧಿನಗರ ,ಬಸವೇಶ್ವರ ವೃತ್ತ,ನೆಹರು ವೃತ್ತ, ಅಂಬೇಡ್ಕರ್ ವೃತ್ತ ದಿಂದ ತ್ಯಾಗರಾಜನ ನಗರದ ಮುಖ್ಯ ರಸ್ತೆಯ ಮೂಲಕ ವಾಲ್ಮೀಕಿ ವೃತ್ತ ಕ್ಕೆ ತಲುಪಿ ನಂತರ ಬಿಎಂಜಿಎಚ್ ಪೌಢಶಾಲೆ ಆವರಣಕ್ಕೆ ಬಂದು ತಲುಪಿತು ಪಥ ಸಂಚಲನ ವೇಳೆ ಸಾರ್ವಜನಿಕರು ಹಾಗೂ ಆರ್ ಎಸ್ ಎಸ್ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿದರು..

ಈ ವೇಳೆ ಆರ್ ಎಸ್ ಎಸ್ ನ ಮುಖಂಡ ಪ್ರಕಾಶ ಮಾತನಾಡಿ,
ರಾಷ್ಟೀಯ ಸ್ವಯಂ ಸೇವಕ ಸಂಘವು ಸಬಲ, ಸದೃಢ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಹಿಂದು ಪರಂಪರೆ, ಸನಾತನ ಸಂಸ್ಕೃತಿ ರಕ್ಷಣೆಯ ಧ್ಯೇಯದೊಂದಿಗೆ ರಾಷ್ಟ್ರಪ್ರೇಮಿಗಳ ಶಕ್ತಿಶಾಲಿ ಸಂಘಟನೆಯಾಗಿದೆ ಎಂದರು..

ಈ ಪಂಥ ಸಂಕಲನದಲ್ಲಿ ಆರ್ ಎಸ್ ಎಸ್ ನ ಬಾಳೆಕಾಯಿ ರಾಮದಾಸ್ ಚಳ್ಳಕೆರೆ ಬಿಜೆಪಿ ಮಂಡಲದ ತಾಲ್ಲೂಕು ಅಧ್ಯಕ್ಷ ಬಿಎಂ ಸುರೇಶ, ಜಯಪಾಲಯ್ಯ,ಡಾ.ಮಂಜುನಾಥ,ಪ್ರಕಾಶ,(ಡಾಬಾ) ಎಬಿವಿಪಿ ಮಂಜುನಾಥ ,ಶ್ರೀನಿವಾಸ್ ,ನವೀನ್,ದಯಾನಂದ ಪ್ರಹ್ಲಾದ್, ಮಾರುತಿ ,ಕೃಷ್ಣಾ,ಯತೀಶ,ಮಿರಾಸಾಭಿಹಳ್ಳಿ ಸುರೇಶ,ಮಾತೃಶ್ರೀ ಮಂಜುನಾಥ ಎಲೆ ವೀರಭದ್ರಪ್ಪ, ಚಿದಾನಂದ, ಸೇರಿದಂತೆ ಆರ್ ಎಸ್ ಎಸ್ ನ ಮುಖಂಡರು ಇದ್ದರು…

About The Author

Namma Challakere Local News
error: Content is protected !!