ಚಳ್ಳಕೆರೆ : ನಗರದಲ್ಲಿ ಹಗಲು-ರಾತ್ರಿ ಎನ್ನದೆ ಎಗ್ಗಿಲ್ಲದೆ ಬೈಕುಗಳ ಸರಣಿ ಕಳ್ಳತನಕ್ಕೆ ರೋಸಿ ಹೋದ ಪೊಲೀಸ್ ಇಲಾಖೆಗೆ ಚಳ್ಳೆಣ್ಣೆ ತಿನಿಸುವ ಕಳ್ಳರ ಚಾಣಾಕ್ಷತನಕ್ಕೆ ಸಾರ್ವಜನಿಕರು ಪೆಟ್ಟು ನೀಡಿದ್ದಾರೆ.
ಹೌದು ಚಳ್ಳಕೆರೆ ನಗರದ ಸಂತೆ ಮೈದಾನದಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನ ಬೈಕ್ ಅನ್ನು ಕಳ್ಳರು ಕಳೆದು ತಿಂಗಳು ಕದ್ದುಕೊಂಡು ಹೋಗಿದ್ದರು.
ಇನ್ನು ಈ ಕದ್ದು ಬೈಕ್ ಅನ್ನು ದೊಡ್ಡ ಉಳ್ಳಾರ್ತಿ ಗ್ರಾಮದ ಯುವಕರಿಗೆ ಅಡಮಾನ ಇಡಲಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನು ಬೈಕ್ ನ ಕೀಯನ್ನು ಹೊಸದಾಗಿ ಮಾಡಿಸಲು ಚಳ್ಳಕೆರೆ ನಗರಕ್ಕೆ ಬೈಕನ್ನು ತಂದಾಗ ಕೀ ಮಾಡಿಸುವ ವೇಳೆ ಬೈಕ್ ಅನ್ನು ಸ್ಥಳಿಯರು ಸೀಜ್ ಮಾಡಿ ಪೊಲೀಸ್ ಇಲಾಖೆಗೆ ಒಪ್ಪಿಸಿದ್ದಾರೆ.
ಇನ್ನೂ ಈ ಬೈಕ್ ನ ಮೂಲ ಮಾಲೀಕರಾದ ಶ್ರೀನಿವಾಸ್ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಎಂದು ಹೇಳಲಾಗಿದೆ.
ಈ ಸರಣಿಗಳತನದಲ್ಲಿ ಭಾಗಿಯಾದ ಎಲ್ಲಾ ಕಳ್ಳರ ಎಡಮುರಿ ಕಟ್ಟಲು ಈ ಬೈಕ್ ನ ಕಳ್ಳರ ಸುಳಿವು ಸಿಕ್ಕರೆ ನಗರದಲ್ಲಿ ಆಗುವಂತಹ ಸರಣಿ ಬೈಕ್ ಗಳತನಗಳ ಕಳ್ಳರು ಸಿಗುತ್ತಾರೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ,
ಇನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಸಿಬ್ಬಂದಿ ತನಿಖೆ ಮುಂದುವರಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

