ಚಳ್ಳಕೆರೆ : ವಿಶ್ವ ಯೋಗ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಹೆಚ್ ಪಿ ಸಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಚಳ್ಳಕೆರೆ ಪೋಲಿಸ್ ಉಪ ವಿಭಾಗದವತಿಂದ ಡಿ ವೈ ಎಸ್ ಪಿ. ಬಿ ಟಿ ರಾಜಣ್ಣ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಿದರು.
ಇನ್ನು ಮುಂಜಾನೆಯೇ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳ ಪಿ ಎಸ್ ಐ , ಕಾನ್ಸ್‌ಟೇಬಲ್ ಹಾಗೂ ಮಹಿಳಾ ಸಿಬ್ಬಂದಿ ವರ್ಗ, ಪೊಲೀಸ್ ವಿಭಾಗದ ಎಲ್ಲಾ ಹಂತದ ನೌಕರರು ಕಾನ್ಸ್‌ಟೇಬಲ್ ಭಾಗವಹಿಸಿ ವಿಶೇಷವಾದಂತಹ ಯೋಗಾದ ಆಸನಗಳನ್ನು ಮಾಡುವುದರ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ವಿಶೇಷವಾಗಿ ಈ ಬಾರಿ ಆಚರಿಸಿದ್ದಾರೆ.
ಅದರಂತೆ ವಿಶ್ವ ಯೋಗ ದಿನಾಚರಣೆಯಲ್ಲಿ ಡಿ ವೈ ಎಸ್ ಪಿ. ಬಿ ಟಿ ರಾಜಣ್ಣ, ಠಾಣಾ ಇನ್ಸ್ಪೆಕ್ಟರ್ ಕೆ ಕುಮಾರ್, ತಳಕು ವೃತ್ತ ನಿರೀಕ್ಷಕರಾದ ಮಂಜುನಾಥ್ ಶಿರೆಹಳ್ಳಿ, ಪಿ ಎಸ್ ಐ ಶಿವರಾಜ್, ಪಿಎಸ್ಐ ದರಪ್ಪ ಬಾಳಪ್ಪ ದೊಡ್ಮನಿ , ಇನ್ನಿತರ ಸಿಬ್ಬಂದಿ ವರ್ಗ ಹಾಗೂ ಮಹಿಳಾ ಕಾನ್ಸ್‌ಟೇಬಲ್ ಗಳು ಪಾಲ್ಗೊಂಡಿದ್ದರು

