ಚಳ್ಳಕೆರೆ :

ಹೊಸದುರ್ಗ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯ ಸಾಣೆ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ.ನಿ. ಇಂದ ನೂತನ ಬಿ.ಎಂ
.ಸಿ ಕಟ್ಟಡದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ ಶಿಮುಲ್ ನಿರ್ದೇಶಕರಾದ ಬಿ.ಸಿ.ಸಂಜೀವ ಮೂರ್ತಿ ರವರು ಮಾತನಾಡಿ ಪೂಜ್ಯ ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದದ ಫಲವಾಗಿ ಇಂದು ಈ ಕಟ್ಟಡದ ಉದ್ಘಾಟನಾ ಸಮಾರಂಭ ನೆರವೇರಿದೆ ಹಾಗೂ ಇಲ್ಲಿನ ಹಾಲಿನ ಉತ್ಪಾದಕರು ಖಾಸಗಿ ಅವರಿಗೆ ಹಾಲನ್ನು ಕೊಡದಂತ್ತೆ ಸಂಘಕ್ಕೆ ಹಾಕಿದರೆ ಒಕ್ಕೂಟದಿಂದ ಸಹಕಾರ ಸಂಘಗಳಿಗೆ ಹಲವಾರು ಹೆಚ್ಚಿನ ಸೌಲಭ್ಯವು ಸಿಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಜಿಪಿ ರೇವಣಸಿದ್ದಪ್ಪ.ಜಿ.ಬಿ.ಶೇಖರಪ್ಪ ಹಾಗೂ ಡಾ. ಮುಕುಂದ ನಾಯಕ್ ಸಹಾಯಕ ವ್ಯವಸ್ಥಾಪಕರು ಚಿತ್ರದುರ್ಗ. ಸಾಣೆ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪ್ರೇಮ ಬಸವರಾಜ್, ಮತ್ತು ನಿವೃತ್ತ ವಿಸ್ತರಣಾಧಿಕಾರಿ ಕೃಷ್ಣಪ್ಪ ರವರು ವಿಸ್ತರಣಾಧಿಕಾರಿಗಳಾದ ಎಸ್.ವಿನೂತ್ ಕುಮಾರ್ ಜಿ. ರವಿಚಂದ್ರ ರವರು ಹಾಗೂ ಸಂಘದ ಅಧ್ಯಕ್ಷರಾದ ಎಸ್.
ಆರ್. ಶಿವಕುಮಾರ್ ಮುಖ್ಯ ಕಾರ್ಯದರ್ಶಿ ಎಸ್.ಆರ್. ಶಾಂತಲಿಂಗಪ್ಪ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಾಣೆ ಹಳ್ಳಿಯ ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!