ಚಳ್ಳಕೆರೆ :
ಹೊಳಲ್ಕೆರೆ: ಒಪನ್ ಆಗದ ಮೊಬೈಲ್ ಆಪ್
ಸಂಗ್ರಹವಾಗದ ದತ್ತಾಂಶ
ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಲು,
ಸರ್ಕಾರವು ಆರಂಭಿಸಿರುವ ಮಹತ್ವಕಾಂಕ್ಷಿ ದತ್ತಾಂಶ ಸಂಗ್ರಹಿಸಲು
ರೂಪಿಸಿರುವ, ಮೊಬೈಲ್ ತಂತ್ರಾಂಶ ತೆರೆದುಕೊಳ್ಳದೆ ಹೊಳಲ್ಕೆರೆ
ಕ್ಷೇತ್ರದ ಭರಮಸಾಗರ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ
ಸಮೀಕ್ಷಾ ಕಾರ್ಯ ಇಂದು ಕೂಡ ನಡೆಯಲಿಲ್ಲ.
ಹಳೆ ರಂಗಾಪುರ
ಸಿರಿಗೆರೆ, ಸೀಗೆಹಳ್ಳಿ ಭರಮಸಾಗರದ ಕೆಲವು ವಾರ್ಡ್, ಲಕ್ಷ್ಮಸಾಗರ
ವಿಜಾಪುರ ಮದಕರಿಪುರಗಳಲ್ಲಿ ದತ್ತಾಂಶ ಸಂಗ್ರಹವಾಗಿಲ್ಲ.
ಸಮೀಕ್ಷಾ ಅಧಿಕಾರಿಗಳು ಲಾಗಿನ್ ಆಗಲು ಪ್ರಯತ್ನಿಸಿ
ವಿಫಲರಾಗಿದ್ದಾರೆ.

