ಶಿಕ್ಷಕ ವೃತ್ತಿ ಎಂಬುವುದು ಶ್ರೇಷ್ಠವಾದ ವೃತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್
ನಾಯಕನಹಟ್ಟಿ:
ಸಮಾಜ ಅಭಿವೃದ್ಧಿಗೆ ಶಿಕ್ಷಕರ ವೃತ್ತಿ ತುಂಬಾ ಮಹತ್ವವಾದದ್ದು ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದರು.
ಶುಕ್ರವಾರ ನಾಯಕನಹಟ್ಟಿ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2025 -26 ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಮತ್ತು ಹೊಂದುತ್ತಿರುವ ಬಡ್ತಿ ಮುಖ್ಯ ಶಿಕ್ಷಕ ಎಂ. ಮಲ್ಲಿಕಾರ್ಜುನ್ ಸಹ ಶಿಕ್ಷಕರಾದ ಕೆ ಜಿ ಬಸವರಾಜ್ ಆರ್ ಪ್ರಕಾಶ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತಾನಾಡಿದ ಅವರು ವೃತ್ತಿಯಲ್ಲಿ ಮನುಷ್ಯನಿಗೆ ತೃಪ್ತಿ ಸಿಗುಬೇಕಾದರೆ ವೃತ್ತಿಯಲ್ಲಿ ಒಳ್ಳೇಯ ಅನುಭವ ಪಡೆದು ಇರುವಂತಹ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಸಮಾಜಕ್ಕೆ ಸೇವೆಯನ್ನು ಒಳಗೊಡಂತೆ ನಾವು ಕಾರ್ಯ ನಿರ್ವಹಿಸಿ ಆ ವೃತ್ತಿಯಿಂದ ನಿವೃತ್ತಿ ಆದಾಗ ಮಾತ್ರ ಆತ್ಮಕ್ಕೆ ತೃಪ್ತಿ ಸಿಗುತ್ತದೆ. ವಿಶೇಷವಾಗಿ ನಮ್ಮ ಶಿಕ್ಷಕರ ವೃತ್ತಿ ತುಂಬಾ ಮಹತ್ವ ಮತ್ತು ಶ್ರೇಷ್ಠ ವೃತ್ತಿ ಸಮಾಜದ ಅಭಿವೃದ್ಧಿಗೆ ಸೌವರ್ಧಕ್ಕೆ ಸಮರಸಕ್ಕೆ ಸಮಾಜದ ಎಲ್ಲಾ ಮೌಲ್ಯಗಳನ್ನ ಒಳಗೊಂಡ ವೃತ್ತಿ ನಮ್ಮ ಶಿಕ್ಷಕರ ವೃತ್ತಿ ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿವುದರ ಮೂಲಕ ಮಕ್ಕಳನ್ನ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಶ್ರೀಮತಿ ಅನಿತಮ್ಮ ಜಿ.ಎಂ. ಜಯಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಕೆ. ಜಿ. ತಿಪ್ಪೇಸ್ವಾಮಿ ,ಗಾದ್ರಪ್ಪ, ಸುಮಿತ್ರಮ್ಮ, ಮಾರಕ್ಕ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷೆ ಕೆ ಸಣ್ಣಸೂರಮ್ಮ, ಕಾರ್ಯದರ್ಶಿ ಈ ಹನುಮಂತ ರಾಯ್, ಉಪಾಧ್ಯಕ್ಷರು ಪಿ.ಎಂ. ವಿಶ್ವನಾಥ್, ಸಿಆರ್‌ಪಿ ಜಿ ಪಾಲಯ್ಯ, ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಬಿ ಎಚ್ ತಿಪ್ಪೇರುದ್ರಪ್ಪ, ಶ್ರೀ ಹೇಮಂತ್ ಕುಮಾರ್, ಮಾಜಿ ಅಧ್ಯಕ್ಷ ಸಿ.ಬಿ .ಉಮೇಶ್, ಶ್ರೀಮತಿ ಇಂದಿರಮ್ಮ, ಗ್ರಾಮಸ್ಥರಾದ ಜವಳಿ ಗಂಗಣ್ಣ, ನಿಂಗಜ್ಜ, ಬಿ. ತಿಪ್ಪೇಸ್ವಾಮಿ, ಆರ್ ಬಸಪ್ಪ, ಆರ್ ಹನುಮಂತಪ್ಪ, ಸಣ್ಣ ಸೂರಯ್ಯ, ಜಿ.ಪಿ. ಪಾಲಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಎಸ್. ಬಿ. ಗುರುಸ್ವಾಮಿ ಉಪಾಧ್ಯಕ್ಷೆ ಕರಿಯಮ್ಮ, ಸದಸ್ಯರಾದ ಗಿರೀಶ್, ರುದ್ರೇಶ್, ಉಮೇಶ್, ವಸಂತ್ ಕುಮಾರ್, ಮಹಾಂತೇಶ್ವರಿ, ವಸಂತಮ್ಮ, ಸುನಿತಾ, ಕಾವೇರಿ , ಸೇರಿದಂತೆ ಶಾಲೆಯ ಶಿಕ್ಷಕ- ಶಿಕ್ಷಕಿಯರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.

