ರೇಖಲಗೆರೆ ಕಾವಲು ಶ್ರೀ ಕಾವಲು ಆಂಜನೇಯ ಸ್ವಾಮಿ ಇಡೀ ಜಿಲ್ಲೆಯಲ್ಲಿ ಪುಣ್ಯಕ್ಷೇತ್ರ ವಾಗಲಿ ಕೆಎಎಸ್ ನಿವೃತ್ತ ಅಧಿಕಾರಿ ಎನ್ ರಘುಮೂರ್ತಿ ಅಭಿಮತ.
ನಾಯಕನಹಟ್ಟಿ: ಭಾರತದ ಇತಿಹಾಸ ಪರಂಪರೆಯಲ್ಲಿ ಶ್ರೀರಾಮನಿಗೆ ಆಂಜನೇಯನಿಗೆ ವಿಶಿಷ್ಟ ಸ್ಥಾನ ಇದೆ ಎಂದು ಕೆಎಎಸ್ ನಿವೃತ್ತ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು.
ಹೋಬಳಿಯ ಗುಂತಕೋಲಮನಹಳ್ಳಿ ಸಮೀಪದ ರೇಖಲಿಗೆರೆ ಕಾವಲು ಶ್ರೀ ಕಾವಲು ಆಂಜನೇಯ ಸ್ವಾಮಿ ಶ್ರಾವಣ ಮಾಸದ ಮೊದಲ ಶ್ರಾವಣ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೀತಿಗೆ ಶ್ರೀರಾಮ ಭಕ್ತಿಗೆ ಹನುಮಂತ ಎನ್ನುವ ಪ್ರತಿತಿಯಿದೆ ಪ್ರತಿಯೊಬ್ಬರೂ ದೈನಂದಿನ ಬದುಕಿನಲ್ಲಿ ಶ್ರೀರಾಮ ಆಂಜನೇಯ ರವರ ಆದರ್ಶಗಳನ್ನ ಅಳವಡಿಸಿಕೊಳ್ಳಬೇಕು ಮುಂದಿನ ದಿನದಲ್ಲಿ ಶ್ರೀ ಕಾವಲು ಆಂಜನೇಯ ಸ್ವಾಮಿ ಕ್ಷೇತ್ರ ಇಡೀ ಜಿಲ್ಲೆಗೆ ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮಲಿ ಎಂದರು.
ಇದೇ ವೇಳೆ ಮುಖಂಡ ಪಾಟೀಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದರು ಆಂಜನೇಯ ಸ್ವಾಮಿ ಮೊದಲ ಶ್ರಾವಣ ಮಾಸದ ವಿಶೇಷ ಪೂಜೆ ಕಾರ್ಯ ನೆರವೇರಿದೆ ಈ ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತನು ಮನ ಧನ ಸಹಾಯದಿಂದ ಮುಂದಿನ ದಿನಗಳಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಈ ಪುಣ್ಯಕ್ಷೇತ್ರದಲ್ಲಿ ಜರುಗುವಂತಾಗಲಿ ದೇವರು ಈ ಭಾಗದ ರೈತರಿಗೆ ಉತ್ತಮ ಮಳೆ ಬೆಳೆ ಸಮೃದ್ಧಿ ಕರುಣಿಸಲಿ ಎಂದರು.
ರೇಖಲಗೆರೆ ಕಾವಲು ಆಂಜನೇಯ ಸ್ವಾಮಿ ಸೇವಾ ಸಮಿತಿಯ ಕಾರ್ಯದರ್ಶಿ ಕೋಲಂನಳ್ಳಿ ಪೀತಾಂಬರ್ ಮಾತನಾಡಿ ಶ್ರೀ ಆಂಜನೇಯ ಸ್ವಾಮಿ ತೇರು ಇನ್ನು ಮೂರ್ನಾಲ್ಕು ವರ್ಷದೊಳಗಾಗಿ ಭಕ್ತರು ಹಣ ಸಹಾಯ ಮಾಡಿದರೆ ಶೀಘ್ರದಲ್ಲೇ ರಥವನ್ನು ಮಾಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಎಂ.ವೈ.ಟಿ ಸ್ವಾಮಿ, ಕಾಂಗ್ರೆಸ್ ಮುಖಂಡ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಪಿ. ಶಿವಣ್ಣ, ಕೊರಡಿಹಳ್ಳಿ ಯುವ ಮುಖಂಡ ಆನಂದಪ್ಪ, ಶ್ರೀ ಕಾವಲು ಆಂಜನೇಯ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಜೆಸಿಬಿ ಎನ್. ತಿಪ್ಪೇಸ್ವಾಮಿ ಗುಂತಕೋಲ್ಮನಹಳ್ಳಿ, ಗೌರವಾಧ್ಯಕ್ಷ ಎಂ. ಚಿನ್ನಯ್ಯ, ಉಪಾಧ್ಯಕ್ಷ ಕೆ. ಜಿ. ತಿಪ್ಪೇಸ್ವಾಮಿ, ಅರುಣ್ ಕುಮಾರ್, ಸಹ ಕಾರ್ಯದರ್ಶಿ ಸಿ ರಮೇಶ್, ಖಜಾಂಚಿ ಮಾರುತೇಶ್ ರೆಡ್ಡಿ, ನಿರ್ದೇಶಕ ರಾಜ್ ಕುಮಾರ್, ಪ್ರಕಾಶ್, ಈಶ್ವರ್, ಪುರೋಹಿತ ಮುರಳಿಕೃಷ್ಣ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು

