ಚಳ್ಳಕೆರೆ :
ಚಳ್ಳಕೆರೆ ನಗರಸಭೆ ಅಧ್ಯಕ್ಷೆ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಇಂದು ಚುನಾವಣಾ ಪ್ರಕಿಯೆ ಮೂಲಕ ನಗರಸಭೆ ಸದಸ್ಯೆ ಶಿಲ್ಪಾ ಮುರುಳಿ ರವರು ಅಧ್ಯಕ್ಷೆ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದಾರೆ
ಇನ್ನೂ ಹನ್ನೊಂದು ಗಂಟೆ ಸುಮಾರಿಗೆ ನಗರಸಭೆ ಸಭಾಂಗಣದಲ್ಲಿ
ಜಿಲ್ಲಾ
ಉಪವಿಭಾಗ ಅಧಿಕಾರಿ ಮಹಮ್ಮದ್ ಜೀಲಾನಿ ಕುರೇಶಿ ಚುನಾವಣಾ ಅಧಿಕಾರಿಗಳಿಗೆ ನಾಮ ಪತ್ರ ಸ್ವೀಕರಿಸಿದ್ದಾರೆ.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನಾ, ಸದಸ್ಯ ರಾಘವೇಂದ್ರ, ರಮೇಶ್, ಉಪಾಧ್ಯಕ್ಷೆ ಕವಿತಾ, ರವರೊಟ್ಟಿಗೆ ನಾಮ ಸಲ್ಲಿಸಿದ್ದಾರೆ.
ಇನ್ನೂ ಇಂದು ಒಂದು ಗಂಟೆ ಸುಮಾರಿಗೆ ನಾಮ ಪತ್ರ ಪರಿಶೀಲನೆ, ಬಹುತೇಕ ಬಿಸಿಎಂ ಬಿ ಮಹಿಳಾ ಅಭ್ಯರ್ಥಿ ಹಾಗಿರುವುದರಿಂದ ಬಹುತೇಕ ಶಿಲ್ಪಾ ಮುರುಳಿಗೆ ಅಧ್ಯಕ್ಷ ಸ್ಥಾನ ಖಚಿತವಾಗಿದೆ .
ಚುನಾವಣಾ ಕರ್ತವ್ಯ ಅಧಿಕಾರಿಗಳಾಗಿ
ತಹಶಿಲ್ದಾರ್ ರೇಹಾನ್ ಪಾಷ, ಪೌರಾಯುಕ್ತ ಜಗರೆಡ್ಡಿ, ಸಿಬ್ಬಂದಿ ವರ್ಗ ಇದ್ದರು.
ಇನ್ನೂ ನಗರಸಭೆ ಅಧ್ಯಕ್ಷೆ ಸ್ಥಾನ ಶಿಲ್ಪಾ ಮುರುಳಿಗೆ ಖಚಿತವಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಇಂದು ಸಂಭ್ರಮ ಮನೆ ಮಾಡಿದೆ, ಇನ್ನೂ ಒಂದು ಗಂಟೆ ಸುಮಾರಿಗೆ ನಗರದ ವಿವಿಧ ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆಗೆ ಸಕಲ ಸಿದ್ದತೆಗಳು ಸನ್ನದು ಹಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

