ಚಳ್ಳಕೆರೆ :
ಚಿತ್ರದುರ್ಗ: 40 ಕೇಜಿ ಬಂಗಾರ ವಶಕ್ಕೆ ಪಡೆದ ಇಡಿ
ಆನ್ ಲೈನ್ ಮತ್ತು ಆಫ್ಘನ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ
ಬಂಧನದಲ್ಲಿರುವ ಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ ಗುರುವಾರ
ಐದನೇ ಬಾರಿಗೆ ದಾಳಿ ನಡೆಸಿ 50.33 ಕೋಟಿ ರೂ. ಮೌಲ್ಯದ 40
ಕೆಜಿ ಬಂಗಾರವನ್ನು ವಶಪಡಿಸಿಕೊಂಡಿದೆ. ಚಳ್ಳಕೆರೆಯ ಎರಡು
ಲಾಖರ್ ಗಳಲ್ಲಿಟ್ಟಿದ್ದ 24 ಕ್ಯಾರೆಟ್ ಚಿನ್ನದ ಗಟ್ಟಿಗಳನ್ನು ವಶಕ್ಕೆ
ಪಡೆಯಲಾಗಿದೆ. ಚಿನ್ನದ ಗಟ್ಟಿಗಳು ಯಾರಿಗೆ ಸೇರಿದ್ದು ಎಂಬುದು
ಇನ್ನೂ ಬಹಿರಂಗವಾಗಿಲ್ಲ.

