ಚಳ್ಳಕೆರೆ : ಜಯಂತಿಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲದಿರುವ ಕಾರಣ ಕೇವಲ ಸ್ವೀಕರ್ ಬಳಕೆಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು.
ಅದರಂತೆ ಚಳ್ಳಕೆರೆ ನಗರದಲ್ಲಿ ನಡೆದ ಶ್ರೀ ವಾಲ್ಮೀಕಿ ಜಯಂತಿಯಲ್ಲಿ ಇಂದು ನಡೆದ ಬೃಹತ್ ಮೆರವಣಿಗೆಯಲ್ಲಿ ಮಲ್ಲಪ್ಪ ನಾಯಕ ಸಂಘದಿಂದ ಎರಡು ವಾಹನಗಳಲ್ಲಿ ತಲಾ ನಾಲ್ಕು ಸ್ಪೀಕರ್ ಗಳಿಗೆ ಮಾತ್ರ ಪೋಲೀಸ್ ಇಲಾಖೆಯಿಂದ ಪರವಾನಿಗೆ ನೀಡಿದ್ದರು ಎನ್ನಲಾಗಿದೆ ಆದರೆ ನಗರಸಭೆ ಕೆಲ ಸದಸ್ಯರು ಸೇರಿ ಒಂದು ವಾಹನದಲ್ಲಿ ನಾಲ್ಕು ಸ್ವೀಕರ್ ಹಾಕಿಕೊಂಡು ಮುಂಜಾನೆಯೇ ವಾಲ್ಮೀಕಿ ವೃತ್ತದಲ್ಲಿ ಬೀಡುಬಿಟ್ಟಿತ್ತು, ಆದರೆ ಶಾಸಕರು ಹಾಗೂ ಕೆಲ ಮುಖಂಡರ ಚರ್ಚೆ ನಡುವೆ ನಗರಸಭೆ ಸದಸ್ಯರ ಭಾವ ಚಿತ್ರವುಳ್ಳ ಸ್ವೀಕರ್ ವುಳ ವಾಹನವನ್ನು ಹಿಂದೆ ಕಳಿಸಿರುವುದು, ಕೆಲ ನಗರಸಭೆ ಸದಸ್ಯರ ಅಸಮಾಧಾನಕ್ಕೆ ಒಳಗೊಳಗೆ ಚರ್ಚೆ ನಡೆಯುತ್ತಿದೆ.
ಇನ್ನೂ ವಾಲ್ಮೀಕಿ ವೃತ್ತದಲ್ಲಿ ಮುಂಜಾನೆಯಿಂದ ಬೀಡುಬಿಟ್ಟಿದ್ದ ಎರಡು ಸೌಂಡ್ ಬಾಕ್ಸ್ ಗಳುಳ್ಳ ವಾಹನಗಳ ಸದ್ದು ಮಾಡುತ್ತಿದ್ದವು, ಆದರೆ ಏಕಾ ಏಕಿ ನಗರಸಭೆ ಸದಸ್ಯರ ಸ್ಪೀಕರ್ ವಾಹನ
ವಾಪಸ್ ಕಳಿಸಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ…

