ಚಳ್ಳಕೆರೆ : ಚಳ್ಳಕೆರೆ ತಾಲೂಕಿನಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ, ಯಾವುದೇ ಇಲಾಖೆಗಳಲ್ಲಿ ಹೋದರು ಸಾರ್ವಜನಿಕರು ಹಣ ಕೊಟ್ಟು ಕೆಲಸಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ, ನಗರಸಭೆಯಲ್ಲಿ ಇ- ಸ್ವತ್ತು ಪಡೆಯಲು ವರ್ಷಗಟ್ಟಲೆ ಸಾರ್ವಜನಿಕರು ಅಲೆಯಬೇಕು, ಆದರೆ ಕಾಂಗ್ರೆಸ್ ಭವನದ ಜಾಗಕ್ಕೆ ಅಧಿಕಾರಿಗಳು ರಾತ್ರೋ ರಾತ್ರಿ ಇಸ್ವತ್ತು ಕೊಡುವುದು ಕಂಡುಬಂದಿದೆ, ಈಗೇ ಅಧಿಕಾರಿಗಳ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಆಗಿರುವ ಭ್ರಷ್ಟಾಚಾರ ತಡೆಗಟ್ಟಲು
ಕೇಂದ್ರ ಸರ್ಕಾರ ಬಡಜನರ ಇತದೃಷ್ಠಿಯಿಂದ ವಿಬಿ ಜಿ ರಾಮ್ ಜಿ ಯೋಜನೆಯು ನರೇಗಾದ ಮೂಲ ಚೈತನ್ಯ ಪಡೆಯಲು ಹಾಗೂ ಹೆಚ್ಚಿನ ಕೂಲಿ ನೀಡುವ ಉದ್ದೇಶದಿಂದ ಜಾರಿಗೆ ತಂದಿದೆ,
ಇನ್ನೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ
ಜಲಜೀವನ ಮಿಷನ್ ರಾಜ್ಯದಲ್ಲಿ ಕಳಪೆ ಗುಣಮಟ್ಟದಿಂದ ಕೂಡಿದೆ, ಆದ್ದರಿಂದ ಜೆ ಜೆ ಎಮ್ ಜಲಜೀವನ್ ಮಿಷನ್‌ನಲ್ಲಿ ಆಗಿರುವ ಲೋಪ ಭ್ರಷ್ಟಚಾರವಾಗಿದೆ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಅನೇಕ ಭವನಗಳು ನಿರ್ಮಾಣವಾಗಿದ್ದು ಹಲವು ವರ್ಷಗಳಾದರೂ ಜನರ
ಉಪಯೋಗಕ್ಕೆ ಸಿಗುತ್ತಿಲ್ಲ, ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಕಟ್ಟಡಗಳು
ವಾಲ್ಮೀಕಿ ಭವನ, ಜಗಜೀವನ್ ರಾಂ ಭವನ, ಇನ್ನೂ ಅನೇಕ ಭವನಗಳು ಪಾಳು ಬಿದ್ದಿವೆ, 2014 ರಿಂದ ಪ್ರಾರಂಭವಾದ ಭವನಗಳು ಶಾಸಕರ ಮೂರು ಅವಧಿ ಕರೆದರು ಮುಗಿದು ಸಾರ್ವಜನಿಕರು ಸೇವೆಗೆ ಲಭ್ಯವಿಲ್ಲದೆ ಇರುವುದು ಕಂಡುಬಂದಿದೆ. ಈಗೇ ಮುಂದುವರೆದರೆ ಭಾರತೀಯ ಜನತಾ ಪಾರ್ಟಿಯಿಂದ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್, ತಾಲೂಕು ಅಧ್ಯಕ್ಷ ಸುರೇಶ್, ಎವಿಬಿಪಿ.ಮಂಜುನಾಥ್,
ಕೃಷ್ಣಪ್ಪ, ಜೆಕೆ.ವೀರಣ್ಣ, ಈಶ್ವರ ನಾಯಕ, ತಿಪ್ಪೆಸ್ವಾಮಿ, , ದಿನೇಶ್ ರೆಡ್ಡಿ, ಕಾಂತರಾಜ್, ದಯಾನಂದ, ಬಂಡೆರಂಗಪ್ಪ, ಇತರರು ಇದ್ದರು.


