ಚಳ್ಳಕೆರೆ : ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾರ್ವಜನಿಕರು.
ಹೌದು ಚಳ್ಳಕೆರೆ ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ಹಾಗಬೇಕು ಎಂದರೆ ವರ್ಷಾನು ಗಟ್ಟಲೆಕಾಯಬೇಕು, ಇನ್ನೂ ಮನೆ ಕಂದಾಯ, ಇ ಸ್ವತ್ತು ಪಡೆಯಲು ಖಾತೆ ಬದಲಾವಣೆ ಈಗೇ ನಗರಸಭೆ ವ್ಯಾಪ್ತಿಯ ಕೆಲಸಗಳಿಗೆ ವರ್ಷಗಳೆ ಲೆಕ್ಕವಿಲ್ಲದಷ್ಟು ಅಧಿಕಾರಿಗಳು ಬೆಜಾಬ್ದಾರಿ ತೋರುತ್ತಾರೆ ಎಂದು ಸಾರ್ವಜನಿಕರು ರೊಬ್ಬರು ಮಾಧ್ಯಮದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮನೆಯ ಇ ಸ್ವತ್ತು ಮಾಡಿಕೊಡಲು ಒಂದು ವರ್ಷ ಒಂದು ತಿಂಗಳು ಕಾಲಾವಕಾಶ ತೆಗೆದು ಕೊಂಡರು ಖಾತೆ ನಂಬರ್ ಚೆಕ್ ಭಂದಿ ತಪ್ಪು ನೀಡುವುದರ ಉದ್ದೇಶ ಏನಿದೆ. ಎಂದು ಸಾರ್ವಜನಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ 25 – 2024 ರಂದು ಇಸ್ವತ್ತು ಗೆ ಅರ್ಜಿ ಹಾಕಿದ್ದೆವೆ ಪ್ರತಿ ನಿತ್ಯ ಕಛೇರಿಯ ಬಾಗಿಲು ತಟ್ಟಿದರು ಒಂದು ವರ್ಷ ಒಂದು ತಿಂಗಳ ಮೇಲೆ ಮಾಡಿಕೊಟ್ಟಿದ್ದಾರೆ.
ಮನೆಯ ಎಲ್ಲಾ ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಕಛೇರಿಗೆ ನೀಡಿದರು ಕೂಡ ದಾಖಲೆಗಳಲ್ಲಿ ತಪ್ಪು ನಮೂದಿಸುವುದು ಯಾವ ಅರ್ಥಕ್ಕೆ ಇನ್ನೂ ಇಲ್ಲಿನ ಆಡಳಿತ ಮೇಲೂಸ್ತೂವಾರಿ ಪೌರಾಕ್ತರನ್ನು ಸಂಪರ್ಕಿಸಿದರೆ ಕ್ಯಾರೆ ಎನ್ನುವುದಿಲ್ಲ ಈಗೇ ಅಧಿಕಾರದ ಚುಕ್ಕಾಣಿ ಹಿಡಿದ ನಗರಸಭೆ ಅಧಿಕಾರಿಗಳ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲ ವಿಳಂಬ ಮಾಡಿ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ , ನಗರಸಭೆ ಅಧಿಕಾರಿಗಳ ಬಗ್ಗೆ ಮೌನ ಮುರಿಯುವುದರ ಹಿಂದೆ ಯಾವ ಉದ್ದೇಶವಿದೆ ಎಂಬುದು ಸಾರ್ವಜನಿಕರ ವಲಯದಲ್ಲಿ ದಟ್ಟವಾಗಿ ಹಬ್ಬಿದೆ.

