ಎನ್.ಗೌರೀಪುರದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ.

ನಾಯಕನಹಟ್ಟಿ: ಸಮೀಪದ ಎನ್.ಗೌರೀಪುರದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮದ ಆರಾಧ್ಯ ಶ್ರೀ ಉಮಾಮಹೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಉಮಾಮಹೇಶ್ವರ ಸ್ವಾಮಿಯ ರಥೋತ್ಸವದ ಗಾಲಿಗೆ ಗೊಂಚಿಗಾರ್ ಸಿದ್ದಪ್ಪ ರವರ ಮನೆಯಿಂದ ಎಡೆ ಅರ್ಪಿಸಿದರು. 3:00ಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ತಂದ ಭಕ್ತರು ಮೂರು ಸುತ್ತು ಪ್ರದಕ್ಷಿಣ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಿದರು.

ನಂತರ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು
ಗೌರಿಪುರ ಗ್ರಾಮದ ವಿಜಯಣ್ಣ ಮೂರು ಲಕ್ಷದ 11,000 ರೂ.ಗೆ. ಮುಕ್ತಿ ಬಾವುಟ ತಮ್ಮದಾಗಿಸಿಕೊಂಡಿರು.

ನಂತರ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವಕ್ಕೆ ಮಹಾಮಂಗಳಾರತಿ ಮಾಡಿ ಗ್ರಾಮಸ್ಥರು ರಥೋತ್ಸವಕ್ಕೆ ಚಾಲನೆಯನ್ನು ನೀಡಿದರು.

ರಥೋತ್ಸವದ ವೇಳೆ ವೀರಗಾಸೆ ನಂದಿಕೋಲು ತಮಟೆ ವಾದ್ಯಗಳೊಂದಿಗೆ ಎನ್ ಗೌರೀಪುರ ಗ್ರಾಮದ ಆರಾಧ್ಯ ದೈವ ಉಮಾಮಹೇಶ್ವರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಪಾದಗಟ್ಟೆಯವರಿಗೆ ಮೆರವಣಿಗೆ
ನಡೆಯಿತು.

ಇದೆ ವೇಳೆ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಬಿ.ಎಂ. ತಿಪ್ಪೇಸ್ವಾಮಿ , ಭೋಗೇಶ್, ಗಂಗಾಧರ್, ಶಿವಾನಂದ ಸ್ವಾಮಿ, ಪೂಜಾರಿ ಪ್ರದೀಪ್.
ಎನ್ ಮಹದೇವಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ, ಸದಸ್ಯರಾದ ತಿಪ್ಪಮ್ಮ ತಿಪ್ಪೇಸ್ವಾಮಿ, ಮಂಜುನಾಥ್, ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ.
ಬೋರನಾಯಕ, ಕುದಾಪುರ ಕೆ.ಜಿ .ಪ್ರಕಾಶ್, ವಕೀಲ ಹಿರೇಹಳ್ಳಿ ಮಲ್ಲೇಶ್, ಪಿಡಿಒ ಗಿರೀಶ್, ಸೇರಿದಂತೆ ಸಮಸ್ತ ಗೌರಿಪುರ ಗ್ರಾಮಸ್ಥರು ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!