ಹೊರಗುತ್ತಿಗೆ ನೌಕರರಿಗೆ ಖಾಯಂ ಮಾಡಲು ಮನವಿ
ಚಿತ್ರದುರ್ಗ : ಸರ್ಕಾರಿ ಕಚೇರಿಗಳಲ್ಲಿ 10ರಿಂದ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವ ಸುಮಾರು ನಾಲ್ಕು ಲಕ್ಷ ಹೊರಗುತ್ತಿಗೆ ನೌಕರರನ್ನು ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸೊಸೈಟಿಯಲ್ಲಿ ಮೊದಲ ಆದ್ಯತೆಯಲ್ಲಿ ಪರಿಗಣಿಸಬೇಕು ಎಂದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾಧಿಕಾರಿಯವರ ಮುಖಾಂತರ ಮನವಿ ಅರ್ಪಿಸಿದರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್ ವಿನಯ್ ಉಪಾಧ್ಯಕ್ಷರಾದ ಎಚ್ ಡಿ ಜಾವೀದ್ ಮತ್ತು ಸದಸ್ಯರು ಇದ್ದರು

