ಚಳ್ಳಕೆರೆ :
ಹಾಲಿನಷ್ಟೆ ಬೆಲೆ ಹಸುಗಳ ಗೊಬ್ಬರಕ್ಕೆ ಬೆಲೆ ಇದೆ ಆದ್ದರಿಂದ ರೈತರು ಹೈನುಗಾರಿಕೆಯಲ್ಲಿ ಆರ್ಥಿಕವಾಗಿ ಮುಂದೆ ಬರಬಹುದು ಎಂದು ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.
ಅವರು ತಾಲೂಕಿನ ಬಾಲೆನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಸಿ ಮಾತನಾಡಿದರು, ರೈತರು ಕೇವಲ ತೋಟಗಾರಿಕೆ ಬೆಳೆಯಲ್ಲಿ ನಷ್ಟ ಹೊಂದುವ ಬದಲು ಹೈನುಗಾರಿಕೆಯ ಮೂಲಕ ಜೀವನ ಹಸನು ಮಾಡಿಕೊಳ್ಳಬಹುದು, ಈಗಾಗಲೇ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸೇರಿ ಹೈನುಗಾರಿಕೆ ಉತ್ತೇಜನಕ್ಕೆ ಪಹಣಿ ಇರುವ ರೈತರಿಗೆ ತಲಾ ಇಪ್ಪತ್ತೈದು ಸಾವಿರ ರೂಪಾಯಿಗಳ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ, ಇದನ್ನು ಎಲ್ಲಾ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಹಾಲು ಒಕ್ಕೂಟದ ಎಲ್ಲಾ ಪದಾಧಿಕಾರಿಗಳು , ಸಾರ್ವಜನಿಕರು ರೈತರು ಪಾಲ್ಗೊಂಡಿದ್ದರು.

