“ಮೌನಪ್ರಭಾವಲಯ ಶ್ರೀಮಾತೆ ಶಾರದಾದೇವಿ”:- ಶ್ರೀಮತಿ ರಂಗಮ್ಮ ಗುಂಡಲ ಅಭಿಮತ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ಮೌನಪ್ರಭಾವಲಯವಾಗಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದ್ಭಕ್ತರಾದ ಶ್ರೀಮತಿ ರಂಗಮ್ಮ ಗುಂಡಲ ಅವರು ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಮಾತೆ ಶಾರದಾದೇವಿ ಒಂದು ಅವತರಣ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು. ದೈವತ್ವದ ಸಾಕಾರ ಮೂರ್ತಿಯಾದ ಅವರು ಇತರರ ಕಷ್ಟಗಳಿಗಾಗಿ ಮರುಗುತ್ತಿದ್ದರು. ಅದಕ್ಕಾಗಿ ಜಪ ಮತ್ತು ಪ್ರಾರ್ಥನೆ ಮಾಡುತ್ತಿದ್ದರು. ಶಾರದಾಮಾತೆಯವರ ಪವಿತ್ರಮಯವಾದ ಜೀವನ ಮತ್ತು ಸಂದೇಶಗಳು ಆಧುನಿಕ ಜನರಿಗೆ ಪ್ರಸ್ತುತವಾಗಿದ್ದು ಅವುಗಳ ಅನುಷ್ಠಾನದಿಂದ ಸಾರ್ಥಕ ಜೀವನ ನಮ್ಮದಾಗುತ್ತದೆ ಎಂದು ಅವರ ಬಗ್ಗೆ ಸವಿವರವಾಗಿ ಮಾತನಾಡಿದರು‌. ಈ ಸಂದರ್ಭದಲ್ಲಿ ಸರ್ವಮಂಗಳ ಶಿವಣ್ಣ ಅವರಿಗೆ ದಿವ್ಯತ್ರಯರ ಭಾವಚಿತ್ರವನ್ನು ಎಚ್ ಲಕ್ಷ್ಮೀದೇವಮ್ಮ ಮತ್ತು ಯತೀಶ್ ಎಂ ಸಿದ್ದಾಪುರ ಅವರು ಕೊಡುಗೆಯಾಗಿ ನೀಡಿದರು. ಸತ್ಸಂಗದ ಪ್ರಯುಕ್ತ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವಿಶೇಷ ಭಜನೆ ಮತ್ತು ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ,ಆರತಿ ಕಾರ್ಯಕ್ರಮ ನಡೆಯಿತು. ವಿಶೇಷ ಸತ್ಸಂಗದಲ್ಲಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್,ಚಂದ್ರಾವತಿ, ಪಂಕಜ ಚೆನ್ನಪ್ಪ, ಸರಸ್ವತಿ ರಾಜು, ಗೀತಾ ಸುಂದರೇಶ್ ದೀಕ್ಷಿತ್, ಅನುಸೂಯ,ಎಂ ಲಕ್ಷ್ಮೀದೇವಮ್ಮ, ಗೀತಾ ವೆಂಕಟೇಶರೆಡ್ಡಿ, ಸರ್ವಮಂಗಳಾ ಶಿವಣ್ಣ, ಪ್ರಮೀಳಾ ಜಗದೀಶ್, ಸರಸ್ವತಿ ನಾಗರಾಜ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!