ಉತ್ತಮ ಮಳೆಗಾಗಿ ಪ್ರಾರ್ಥಿಸಿ ದಲ್ಲಾಲರ ಸಂಘದ ವತಿಯಿಂದ ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿಗೆ ಶ್ರಾವಣ ಮಾಸದ ವಿಶೇಷ ಪೂಜೆ
ಚಳ್ಳಕೆರೆ:ನಗರದ ಸೂಜಿ ಮಲ್ಲೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರದ ಪ್ರಯುಕ್ತ ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ದಲ್ಲಾಲರ ಸಂಘ ಹಾಗೂ ಸೂಜಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಸಂಯುಕ್ತ ಆಶ್ರಯದಲ್ಲಿ ತಾಲೂಕಿನಲ್ಲಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಸೂಜಿ ಮಲ್ಲೇಶ್ವರ ಸ್ವಾಮಿಗೆ ಸೋಮವಾರ ಬೆಳಗ್ಗೆ ಏಳು ಗಂಟೆಯಿಂದಲೇ ಬಿಲ್ವಾರ್ಚನೆ ಪಂಚಾಮೃತ ಅಭಿಷೇಕ ರುದ್ರಭಿಷೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು ಮಾತನಾಡಿದ ಕೃಷಿ ಉತ್ಪನ್ನ ಮಾರುಕಟ್ಟೆ ದಲ್ಲಾಳರ ಸಂಘದ ಅಧ್ಯಕ್ಷ ಡಿ ಎಂ ತಿಪ್ಪೇಸ್ವಾಮಿ ಚಳ್ಳಕೆರೆ ತಾಲೂಕು ಬಯಲು ಸೀಮೆ ಪ್ರದೇಶವಾದ್ದರಿಂದ ಪ್ರತಿ ವರ್ಷ ಮಳೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತೇವೆ ಆದ್ದರಿಂದ ಈ ವರ್ಷವೂ ಮುಂಗಾರು ಹಂಗಾಮು ಬೇಗ ಪ್ರಾರಂಭವಾಗಿ ನಗರದ ನಾಗರಿಕರಲ್ಲಿ ಹಾಗೂ ರೈತ ಸಮುದಾಯದಲ್ಲಿ ಸಂತಸ ಉಂಟು ಮಾಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲ್ಲಾಲರ ಸಂಘದ ಉಪಾಧ್ಯಕ್ಷ ಶಿವಕುಮಾರ್ ಸಿದ್ದರಾಮಪ್ಪ ಕಾರ್ಯದರ್ಶಿ ಟಿ ರವೀಂದ್ರ ಸಹ ಕಾರ್ಯದರ್ಶಿ ರಾಘವೇಂದ್ರ ಖಜಾಂಚಿ ಪ್ರಕಾಶ್ ಶ್ರೀನಿವಾಸ್ ಬಾಬು ಮಲ್ಲಿಕಾರ್ಜುನ ಬಸವರಾಜ್ ಮಂಜುನಾಥ ಮಲ್ಲೇಶ್ವರ ಶ್ರೀನಿವಾಸ ತಿರುಮಲೇಶ್ ದೇವಸ್ಥಾನ ಸಮಿತಿಯ ಸದಸ್ಯರಾದ ಜಯಣ್ಣ ಶಿವಣ್ಣ ಮಲ್ಲಿಕಾರ್ಜುನ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

