filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಚಳ್ಳಕೆರೆ : ವಕೀಲರ ಸಂಘದ 2026 ರಿಂದ 2028 ರವರೆಗಿನ ಸಾಲಿನ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಜಿ.ಆರ್.ಅಶ್ವತ್ಥನಾಯಕ ಆಯ್ಕೆಯಾಗಿದ್ದಾರೆ.

ನಗರದ ವಕೀಲರ ಸಂಘದ ಕಛೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಿ.ಆರ್.ಅಶ್ವತ್ಥನಾಯಕ, ಜಿಟಿ‌‌.ನಾಗರಾಜ್, ಹಾಗೂ ಎಂಪಿ.ಮಹೇಶ್ ಸ್ಪರ್ಧಿಸಿದರು
ಆದರೆ ಚುನಾವಣೆ ಪ್ರಕ್ರಿಯೆಯಲ್ಲಿ ಸುಮಾರು70 ಮತಗಳನ್ನು ಪಡೆಯುವ ಮೂಲಕ ನಾಲ್ಕು ನೇ ಬಾರಿಗೆ ಜಯಬೇರಿ ಸಾಧಿಸಿದ್ದಾರೆ.

ನೂತನ ಅಧ್ಯಕ್ಷ ಜಿ.ಆರ್.ಅಶ್ವತ್ಥನಾಯಕ ರವರು ಕಳೆದ 2010 ರಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು ನಂತರ 2010ರಲ್ಲಿ 2016 ರಲ್ಲಿ , ಹಾಗೂ 2025 ರ ಪ್ರಸ್ತುತ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಇನ್ನೂ ನೂತನ ‌ಅಧ್ಯಕ್ಷರಾದ ಜಿ.ಆರ್.ಅಶ್ವತ್ಥನಾಯಕ ಮಾತನಾಡಿ,
ತಾಲ್ಲೂಕು ವಕೀಲರ ಸಂಘವು ವಕೀಲರ ಹಿತಾಸಕ್ತಿ ಮತ್ತು ವೃತ್ತಿಪರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಪ್ರಮುಖ ಅಂಗವಾಗಿದೆ, ಇದು ವಕೀಲರಿಗೆ ತರಬೇತಿ, ಕಾನೂನು ಜಾಗೃತಿ, ಮತ್ತು ಸಮುದಾಯ ಸೇವಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ.ಇನ್ನೂ ನಾಲ್ಕನೇ ಬಾರಿಗೆ ನನನ್ನು ಬೆಂಬಲಿಸಿದ ಎಲ್ಲಾ ವಕೀಲರಿಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದರು.

ವಕೀಲರ ಸಂಘದ ಪದಾಧಿಕಾರಿಗಳ
ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಅಭ್ಯರ್ಥಿಗಳ ವಿವರ
ಅಧ್ಯಕ್ಷರ ಸ್ಥಾನಕ್ಕೆ ಜಿ.ಆರ್.ಅಶ್ವತ್ಥನಾಯಕ,
ಉಪಾಧ್ಯಕ್ಷರ ಸ್ಥಾನಕ್ಕೆ ಬಿ.ಟಿ.ಶ್ಯಾಮಲ, ಓ.ಪಾಪಣ್ಣ,
ಪ್ರಧಾನ ಕಾರ್ಯದರ್ಶಿ
ಟಿ.ಪರಮೇಶ್ವರಪ್ಪ,
ಸಹಕಾರ್ಯದರ್ಶಿ ಹೆಚ್.ನಾಗರಾಜ, ಖಜಾಂಚಿ ಸ್ಥಾನಕ್ಕೆ ಬಿ.ಎಂ.ಬಸವರಾಜೇಶ್ವರಿ,
ಕಾರ್ಯಕಾರಿ ಸಮಿತಿ
ಸ್ಥಾನಕ್ಕೆ ಓ.ಹೆಚ್.ಜಯಣ್ಣ,
ದೊರೆನಾಗರಾಜ್, ವಕೀಲರು (ಡಿ.ಎನ್), ಗೋವಿಂದಪ್ಪವಿ., ವಕೀಲರು(ವಿ.ಜಿ), ಜಿ.ಓ.ಸುಮಲತ, ವಕೀಲರು(ಜಿ.ಓ.ಎಸ್), ಎಸ್.ಮಮತ ವಕೀಲರು(ಎಸ್.ಎಂ.ಜಿ), ಬಿ.ಕೆ.ಮಂಜುನಾಥ, ವಕೀಲರು(ಬಿ.ಕೆ.ಎಂ), ಟಿ.ತಿಪ್ಪೇಸ್ವಾಮಿ, ವಕೀಲರು(ಟಿ.ಟಿ), ಆರ್.ಓಂಕಾರಿ, ವಕೀಲರು(ಆರ್.ಓ), ಡಿ.ಆರ್.ರವೀಂದ್ರ ವಕೀಲರು(ಡಿ.ಆರ್.ಆರ್), ಆರ್.ಪಿ.ತಿಪ್ಪೇಸ್ವಾಮಿ, ವಕೀಲರು(ಆರ್.ಪಿ.ಟಿ) ಆಯ್ಕೆ ಯಾಗಿದ್ದಾರೆ.

About The Author

Namma Challakere Local News
error: Content is protected !!