ಚಳ್ಳಕೆರೆ :
ಹಿರಿಯೂರು ತಾಲೂಕು ಸೊಂಡೆಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು.
ಈ ಸಭೆಗೆ ಸಂಘದ ಅಧ್ಯಕ್ಷರಾದ ಎಲ್. ಕೆಂಚಮ್ಮರವರು ಅಧ್ಯಕ್ಷತೆ ವಹಿಸಿದ್ದರು. ಸಭೆಗೆ ಆಗಮಿಸಿದ್ದ ಶಿಮುಲ್ ಜಿಲ್ಲಾ ನಿರ್ದೇಶಕರಾದ. ಬಿ.ಸಿ. ಸಂಜೀವಮೂರ್ತಿಯವರು ಮುಖ್ಯ ಅತಿಥಿಗಳ ಭಾಷಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಂಡು ಗ್ರಾಮದ ಸಹಕಾರವನ್ನು ಪಡೆದು ಸಂಘವನ್ನು ಸರಿಯಾದ ರೀತಿಯಲ್ಲಿ ಕೊಂಡೋಯುವುದು ಸಂಘದ ಕರ್ತವ್ಯವಾಗಿದೆ.
ತಾವುಗಳು ಸಂಘದ ಏನೇ ಕುಂದು ಕೊರತೆ ಇದ್ದರೆ ನಮಗಾಗಲಿ ಅಧಿಕಾರಿಗಳಿ ಗಾಗಲಿ ತಿಳಿಸಬೇಕೆಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಮ್ಮ ನಾಗರಾಜ್ ರವರು ಹಾಗೂ ಮಾರ್ಗ ವಿಸ್ತರಣಾಧಿಕಾರಿಗಳಾದ ನಯಾಜ್ ಬೇಗ್ ಮತ್ತು ಕಾರ್ಯದರ್ಶಿ ಚೈತ್ರ ,ಚಂದ್ರಶೇಖರ್ ಸಂಘದ ನಿರ್ದೇಶಕರುಗಳಾದ ಲಕ್ಷ್ಮಿಬಿ ರೇಣುಕಮ್ಮ ಶೃತಿ ರತ್ನಮ್ಮ ಮಂಜುಳಾ ಹಾಗೂ ಗ್ರಾಮದ ಮುಖಂಡರಾದ ಮಂಜಣ್ಣ ಪೂಜಾರ್ ನಾಗಣ್ಣನವರು ಹಾಗೂ ಗ್ರಾಮದ ಉಪಸ್ಥಿತರಿದ್ದರು.

