ಚಳ್ಳಕೆರೆ: ತಾಲೂಕಿನ ತೆಂಗು ಬೆಳೆಗಾರರ ಪುನಶ್ಚೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಕೆ ಚಿಕ್ಕಣ್ಣ ತಾಲೂಕಿನಲ್ಲಿ ತೆಂಗು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು ಈಗಾಗಲೇ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಕೂಡಲೇ ಅಧಿಕಾರಿಗಳು ಸರ್ಕಾರದ ಗಮನ ಸೆಳೆದು 50 ಲಕ್ಷ ಪರಿಹಾರವನ್ನು ಘೋಷಿಸಿ ತೆಂಗು ಬೆಳೆಗಾರರ ನೆರವಿಗೆ ಬರಬೇಕು ಎಂದು ಆಗ್ರಹಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಮಾತನಾಡಿ ತಾಲೂಕಿನ ಅತಿ ದೊಡ್ಡ ಹೋಬಳಿಯಾದ ಪರಶುರಾಮರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ರೈತರು ಅತಿವೃಷ್ಟಿಯಿಂದ 2024-25 ಸಾಲಿನ ಬೆಳೆ ವಿಮೆ ನೀಡಬೇಕು ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರ ಟಿ ಎನ್ ಕೋಟೆ ಸಿದ್ದೇಶ್ವರನ ದುರ್ಗ ದೊಡ್ಡಚಲ್ಲೂರು ಗ್ರಾಮಗಳಲ್ಲಿ ವೈದ್ಯಾಧಿಕಾರಿ ಹೆರಿಗೆ ತಜ್ಞರು ಅರವಳಿಕೆ ತಜ್ಞರು ಹಾಗೂ ಮಕ್ಕಳ ತಜ್ಞರ ಕೊರತೆ ಇದ್ದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸೌಲಭ್ಯ ಒದಗಿಸಬೇಕು ವಿದ್ಯುತ್ ಅಕ್ರಮ ಸಕ್ರಮಕ್ಕೆ 35,000 ಹಣ ಪಡೆದು ಇದುವರೆಗೂ ಕಾಮಗಾರಿಗೆ ಚಾಲನೆ ನೀಡಿಲ್ಲ ಮಹದೇವಪುರ ಗ್ರಾಮದಲ್ಲಿ ವೈಶ್ಯ ಬ್ಯಾಂಕ್ ಸಿಬ್ಬಂದಿಗಳು ರೈತರೊಂದಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಗ್ರಾಮೀಣ ಬ್ಯಾಂಕ್ ಶಾಖೆಯನ್ನು ತೆರೆಯಬೇಕು ಪರಶುರಾಂಪುರ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಸರ್ಕಾರಿ ಬಸ್ ಸೌಲಭ್ಯ ಒದಗಿಸಬೇಕು ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಪರಶುರಾಂಪುರದ ನಾಡಕಚೇರಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಶಾಂತಣ್ಣ ತಿಮ್ಮಣ್ಣ ಹೆಚ್ ಪ್ರಕಾಶ್ ಖಾದರ್ ಭಾಷಾ ಹನುಮಂತರಾಯ ಮಂಜುನಾಥ ನವೀನ್ ಗೌಡ ಅಣ್ಣಪ್ಪ ಶಿವಪ್ಪ ರಾಜಣ್ಣ ಮಲ್ಲೇಶ್ ನಾರಾಯಣ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

