ಚಳ್ಳಕೆರೆ: ಪ್ರತಿ ವರ್ಷದಂತೆ ಈ ಬಾರಿಯು
ಶಾಂತಿ ಸೌಹಾರ್ದತೆಯ ಸಂಕೇತವಾದ
ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ
ತಾಲೂಕಿನಲ್ಲಿ ಶಾಂತಿ ಕಾಪಾಡುವಂತೆ ಡಿವೈಎಸ್ ಪಿ ಬಿಟಿ.ರಾಜಣ್ಣ ಹೇಳಿದರು.
ನಗರದ ಡಿವೈಎಸ್ ಪಿ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಿ
ಮಾತನಾಡಿದ ಅವರು ತಾಲೂಕಿನಲ್ಲಿ ಇದುವರೆಗೂ
ಹಿಂದೂ ಮುಸ್ಲಿಮರು ಸಹೋದರ ಭಾವದಿಂದ
ಜೀವನ ನಡೆಸಿದ್ದಾರೆ ಯಾವುದೇ ಅಹಿತಕರ
ಘಟನೆಗಳು ನಡೆದಿರುವ ನಿದರ್ಶನಗಳಿಲ್ಲ
ಆದ್ದರಿಂದ ಈ ಬಾರಿಯೂ ಶಾಂತಿಯಿಂದ ಹಬ್ಬ
ಆಚರಿಸಬೇಕು ಅದಕ್ಕೆ ಬೇಕಾದ ಪೊಲೀಸ್
ಬಂದೋಬಸ್ತ್ ವ್ಯವಸ್ಥೆಯನ್ನು ಇಲಾಖೆಯಿಂದ
ಒದಗಿಸಲಾಗುವುದು ಹಬ್ಬದ ದಿನ ಆಚರಣೆಗಳ
ವೇಳೆ ನಿಯಮಗಳನ್ನು ಪಾಲಿಸಬೇಕು ಸಾಮಾಜಿಕ
ಜಾಲತಾಣಗಳಲ್ಲಿ ಯಾವುದೇ ಸಮುದಾಯದ
ಜನರಿಗೆ ನೋವುಂಟು ಮಾಡುವ ಪೋಸ್ಟ್
ಗಳನ್ನು ಹರಿ ಬಿಡಬಾರದು ಇದು ಕಾನೂನು
ಉಲ್ಲಂಘನೆಯಾಗುತ್ತದೆ ಎಂದರು.
ಠಾಣೆಯ ವೃತ್ತ ನಿರೀಕ್ಷಕ ಆರ್ ಎಫ್ ದೇಸಾಯಿ ಮಾತನಾಡಿ,
ಯುವಕರು
ಕಾನೂನು ಮತ್ತು ನಿಯಮಗಳನ್ನು ಮೀರಿ
ನಡೆದರೆ ನಿರ್ದಾಕ್ಷಿಣ್ಯವಾಗಿ ಕಟ್ಟು ನಿಟ್ಟಿನ ಕ್ರಮ
ಕೈಗೊಳ್ಳಲಾಗುವುದು, ಬಕ್ರಿದ್ ಹಬ್ಬವು ಮುಸ್ಲಿಂ
ಬಾಂಧವರಿಗೆ ಪವಿತ್ರ ಹಬ್ಬವಾಗಿದ್ದು ಇದ್ದಾ
ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಗುವುದು
ಶಾಂತಿಯಿಂದ ಹಬ್ಬವನ್ನು ಆಚರಿಸಲಾಗುವುದು
ಎಂದರು.
ಕ ಈ ಸಂದರ್ಭದಲ್ಲಿ ಪೊಲೀಸ್ ವೃತ ನಿರೀಕ್ಷಕ, ಮಂಜುನಾಥ್,
ಆರ್ ಎಫ್ ದೇಸಾಯಿ, ಉಪನಿರೀಕ್ಷಕ ಜೆ ಶಿವರಾಜ್, ಪಿಎಸ್ಐ ದರೇಪ್ಪ ಬಾಳಪ್ಪ ದೊಡ್ಡಮನಿ, ಹಾಗೂ ಎಲ್ಲಾ ಠಾಣೆಯ ಪಿಎಸ್ ಐ ಗಳು, ಹಾಗೂ ಸಮುದಾಯದ
ದಾದಾಪೀರ್, ಅತಿಕ್ ಉರ್, ರೆಹಮಾನ್ ಸಾಧಿಕ್, * ಬಾಬು ಪರಮೇಶ್ ಬಶೀರ್ ಹಯಾತ್ ಸೇರಿದಂತೆ
ಹಲವರು ಉಪಸ್ಥಿತರಿದ್ದರು.

