ಚಳ್ಳಕೆರೆ :
ಚಿತ್ರದುರ್ಗ: ಅವಧಿ ಮೀರಿದ ತಂಪು ಪಾನೀಯ
ಮಾರಾಟ ಕ್ರಮಕ್ಕೆ ಸೂಚನೆ
ಚಿತ್ರದುರ್ಗದ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಅವಧಿ ಮೀರಿದ
ತಂಪು ಪಾನೀಯ, ಮಾರಾಟ ಮಾಡುವುದನ್ನು ಗುರುತಿಸಿ,
ಅಂಗಡಿ ಮಾಲೀಕರು ಹಾಗೂ ಸಾರಿಗೆ ನಿಗಮದ ಅಧಿಕಾರಿಗಳ
ಬಗ್ಗೆ ಕ್ರಮ ಜರುಗಿಸುವಂತೆ ಮಾನವಹಕ್ಕುಗಳ ಆಯೋಗದ
ಅಧ್ಯಕ್ಷ ಶಾಮ್ ಭಟ್ ಜಿಲ್ಲಾಡಳಿತಕ್ಕೆ ಸೂಚಿಸಿದರು. ಗುರುವಾರ
ksrtc ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣದ ಶೌಚಾಲಯ
ಸ್ವಚ್ಛವಾಗಿಟ್ಟುಕೊಳ್ಳಬೇಕು. ಕ್ಯಾಂಟಿನ್ ನಲ್ಲಿ ಒಮ್ಮೆ ಕರೆದ
ಅಡುಗೆ ಎಣ್ಣೆ ಮತ್ತೆ ಬಳಸಬಾರದು ಎಂದು ಕ್ಯಾಂಟಿನ್ ಸಿಬ್ಬಂದಿಗೆ
ಸೂಚಿಸಿದರು.

