ಕುದಾಪುರ: ಕ್ರಿಕೆಟ್ ಕ್ರೀಡಾಕೂಟ ಉದ್ಘಾಟಿಸಿದ ಜಿ.ಬಿ.ಉಮೇಶ್ ಯುವಕರು ಕ್ರೀಡೆಯ ಜೊತೆಯಲ್ಲಿ ಉತ್ತಮ ಶಿಕ್ಷಣ ಪಡೆಯಿರಿ ಸಲಹೆ

ನಾಯಕನಹಟ್ಟಿ: ಪ್ರತಿಯೊಬ್ಬರೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಿ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಿ.ಬಿ. ಉಮೇಶ್ ಹೇಳಿದರು.

ಸೋಮವಾರ ಸಮೀಪದ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದಾಪುರ ಗ್ರಾಮದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಜಿ.ಬಿ
ಉಮೇಶ್ ಹುಟ್ಟು ಹಬ್ಬದ ಪ್ರಯುಕ್ತ ಯುವಕರು ಹಾಗೂ ಗ್ರಾಮಸ್ಥರು.ಆಯೋಜಿಸಿದ ಬಹುಜನ ನಾಯಕ ಜೈ ಭೀಮ್ ಸಿಂಗಂ ಕಪ್ ಕ್ರಿಕೆಟ್ ಕೂಟಕ್ಕೆ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸರ್ವರಿಗೂ ಸಮಾನತೆ ಹಕ್ಕನ್ನು ನೀಡಿದ್ದಾರೆ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ತತ್ವ ಸಿದ್ಧಾಂತಗಳನ್ನು ರೂಡಿಸಿಕೊಂಡು ಉತ್ತಮವಾಗಿ ಜೀವನ ನಡೆಸಬೇಕು ನಮ್ಮ ಕುದಾಪುರ ಗ್ರಾಮಕ್ಕೆ ಕಲೆ ಮತ್ತು ಕ್ರೀಡೆಗೆ ಭವ್ಯ ಇತಿಹಾಸ ಇದೆ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಮಾತ್ರ

ನಾಯಕನಹಟ್ಟಿ ಬೆಸ್ಕಾಂ ಶಾಖಾಧಿಕಾರಿ ಎನ್. ಬಿ.ಬೋರಣ್ಣ, ಪಶು ಇಲಾಖೆ ಡಿ ಎಂ ಮುಕ್ಕಣ್ಣ ಮಾತನಾಡಿದರು.

ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರಾದ ಜಿ ಪಾಪನಾಯಕ, ಎ. ತಿಪ್ಪೇಸ್ವಾಮಿ, ಸಣ್ಣಬಸಯ್ಯ, ಕೆ.ಜಿ. ಪ್ರಕಾಶ್, ಡಿ.ಸಿ. ಶ್ರೀನಿವಾಸ್, ಎ.ಕೆ.ಗುಂಡಪ್ಪ, ದಾಸರ ಬೋರಯ್ಯ, ಕೆ ಬಿ ಬೋರಯ್ಯ, ಜಿ.ಪಿ. ಪಾಪನಾಯಕ,ಬಿ.ಓಬಣ್ಣ, ದಾವಣಗೆರೆ ಓಬಣ್ಣ, ಗೌಡ್ರು ನಾಗರಾಜ್, ಕೆ ಜಿ ಓಬಣ್ಣ, ಬಿ ಮಂಜಣ್ಣ, ಚಿದಾನಂದ, ಸೂರ್ಯಪ್ರಕಾಶ್, ಜಿ.ಪಿ. ಚಂದ್ರಣ್ಣ, ಎಸ್ ರಾಜಣ್ಣ, ಜಯಣ್ಣ, ಎ.ಚಿನ್ನನಾಯಕ, ಸತೀಶ್ ಪಿ.ಬಿ. ಬೋರಣ್ಣ,
ಯುವ ಮುಖಂಡರಾದ ಕೆ ಜಿ ಓಬಣ್ಣ, ಎನ್.ಬಿ. ಸತೀಶ್, ಜಿ.ಬಿ. ಲೋಕೇಶ್ ಜಿ.ಬಿ. ಬೋರಣ್ಣ, ಜಿ.ಸಿ.ಪಾಪಣ್ಣ, ಕೆ.ಬಿ. ಬೋರಣ್ಣ, ಜಿ.ಪಾಪನಾಯಕ, ಸೇರಿದಂತೆ ಸಮಸ್ತ ಊರಿನ ಗ್ರಾಮಸ್ಥರು ಕ್ರೀಡಾಪಟುಗಳು ಇದ್ದರು

About The Author

Namma Challakere Local News
error: Content is protected !!