ಚಳ್ಳಕೆರೆ : ದೇಶಭಕ್ತಿಯ ಜಾಗೃತಿ ಮೂಡಿಸಲು ಶಿಕ್ಷಕರ ಪಾತ್ರ ತುಂಬಾ ಸಹಕಾರಿ ಎಂದು ನಿವೃತ್ತ ಕೆ ಎ ಎಸ್ ಅಧಿಕಾರಿ ರಘುಮೂರ್ತಿ ಹೇಳಿದರು
ಅವರು ನಾಯಕನಟ್ಟಿ ಪಟ್ಟಣದಲ್ಲಿ ಎಸ್ ಟಿ ಆರ್ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿ ಅವರ 90 ವರ್ಷದ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಯುವಕರು ಮತ್ತು ವಿದ್ಯಾರ್ಥಿಗಳು ದೇಶ ಕಟ್ಟುವ ಕೆಲಸ ಹಾಗೂ ಇದರ ಪ್ರೇರೇಪಣೆ ಶಿಕ್ಷಕರುಗಳಿಂದಾಗಬೇಕು ಸ್ವಾರ್ಥ ತುಂಬಿರುವಂತಹ ಸಮಾಜದಲ್ಲಿ ನಿಸ್ವಾರ್ಥ ಬದುಕಿನ ಬೆಳಕನ್ನು ಶಿಕ್ಷಕರುಗಳು ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೋರಿಸಬೇಕು ಪ್ರೀತಿ ವಿಶ್ವಾಸ ಪರೋಪಕಾರ ಮತ್ತು ಮಾನವೀಯ ಮೌಲ್ಯಗಳ ನವ ಸಮಾಜದ ನಿರ್ಮಾಣಕ್ಕೆ ಶಿಕ್ಷಕರುಗಳು ತಮ್ಮನ್ನು ತಾವು ದಾರೆ ಎರೆ ಯಬೇಕು ಎಂದು ಹೇಳಿದರು.
ಸತ್ಯ ಧರ್ಮ ಭಕ್ತಿ ಮತ್ತು ನಂಬಿಕೆಯ ಭೂಮಿಯಾದ ನಾಯಕನಹಟ್ಟಿಯಲ್ಲಿ ವೀರಶೈವ ಸಮಾಜದವರ ಕೊಡುಗೆ ಅಪಾರ ಇದೆ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸ ಈ ಸಮಾಜದ ಹೆಗಲ ಮೇಲಿದೆ ನಿವೃತ ಶಿಕ್ಷಕರಾದ ಶಿವಲಿಂಗ ಮೂರ್ತಿ ಅವರು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರದ ಬೆಳಕನ್ನು ನೀಡಿದ್ದಾರೆ ಇದರ ಮುಖಾಂತರ ಸಮಾಜದ ಬದಲಾವಣೆಗೆ ದಾರಿದೀಪವಾಗಿದ್ದರೆ ಮನುಷ್ಯನ ಸಾರ್ಥಕ ಜೀವನದ ಒಂದು ಭಾಗವಾಗಿದ್ದಾರೆ ಶತಾಯುಷಿಯಾಗುವ ದಿಕ್ಕಲ್ಲಿ ಭಗವಂತನ ಪ್ರೇರಣೆಯಾಗಲಿ ಎಂದು ಆಶಿಸಿದರು.
ಜಿಲ್ಲಾ ಜಂಗಮ ಸಂಘದ ಅಧ್ಯಕ್ಷ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಮಾತನಾಡಿ, ಸಾರ್ಥಕ ಜೀವನಕ್ಕೆ ಇನ್ನೊಂದು ಉದಾಹರಣೆ ನಿವೃತ್ತ ಹಿಂದಿ ಶಿಕ್ಷಕರಾದ ಶಿವಲಿಂಗ ಮೂರ್ತಿಯವರು ಮನುಷ್ಯನ ಜೀವನದಲ್ಲಿ ನಿರ್ದಿಷ್ಟವಾದ ಕೊಡುಗೆಯನ್ನು ಈ ಸಮಾಜಕ್ಕೆ ನೀಡಬೇಕು ಅದು ಯಾವುದೇ ಕ್ಷೇತ್ರದಲ್ಲಾಗಲಿ ತಾವು ಮಾಡುವ ಕೆಲಸ ಮೈಲಿಗಲ್ಲಾಗಬೇಕು ಎಂದು ಹೇಳಿದರು
ಪಟೇಲ್ ಜಿ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು ಮಾತನಾಡಿ, ಸಮಾಜದಲ್ಲಿ ನಿಸ್ವಾರ್ಥ ಬದುಕಿನ ವ್ಯಕ್ತಿಗಳು ಕಣ್ಮರೆಯಾಗುತ್ತಿದ್ದಾರೆ ಸಮಾಜ ಸೇವೆ ಪ್ರತಿಯೊಬ್ಬನ ಜೀವನದ ಅವಿಭಾಜ್ಯ ಅಂಗ ವಾಗಬೇಕು ಆಗಬೇಕು ಶಿವಲಿಂಗ ಮೂರ್ತಿಯವರ ಬದುಕಿನ ನಿಸ್ವಾರ್ಥ ಸೇವೆ ತುಂಬಾ ಅನನ್ಯವಾದುದು ಎಂದು ಹೇಳಿದರು.
ಶಾರದಾಶ್ರಮದ ಮಾತಾಜಿ ಆಶೀರ್ವಚನ ನೀಡಿದರು, ರಾಮಕೃಷ್ಣ ರೆಡ್ಡಿ , ಎಂ ಓಟಿ ಸ್ವಾಮಿ ಮುಂತಾದವರು ಮಾತನಾಡಿದರು ವಿಜಯನಗರ ಜಿಲ್ಲೆಯ ಜಂಗಮ ಸಮಾಜದ ಅಧ್ಯಕ್ಷ ಕಾಶಿನಾಥ್ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವ ಸ್ವಾಮಿ ಇನ್ನು ಮುಂತಾದವರು ಉಪಸ್ಥಿತರಿದ್ದರು

