ಚಳ್ಳಕೆರೆ :

ಹಿರಿಯೂರು ತಾಲೂಕು ಮರಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಎಂ. ಆರ್. ರವಿ ಹಾಗು ಉಪಾಧ್ಯಕ್ಷರಾದ ಎಸ್. ಉಮೇಶ್ ರೆಡ್ಡಿ ಇವರ ಘನಾಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವಮೂರ್ತಿ ರವರಿದ್ದರು.

ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ಸಂಘದ ಹಾಲು ಉತ್ಪಾದಕರಾದ ಮನೋಜ್ ರವರಿಗೆ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ನಿರ್ದೇಶಕರು ಇವರ gtr ಕಾಮಧೇನು ಡೈರಿ ಫಾರಂ ಅನ್ನು ವೀಕ್ಷಿಸಲಾಯಿತು.ಉಪ ವಿಭಾಗ ಅಧಿಕಾರಿಗಳಾದ ಎಂ ಪುಟ್ಟರಾಜು ರವರು ಮತ್ತು ಮಾರ್ಗ ವಿಸ್ತರಣಾಧಿಕಾರಿಗಳಾದ ಎಸ್. ನಯಾಜ್ ಬೇಗ್ 2024 25 ಈ ಸಾಲಿನ ವಾರ್ಷಿಕ ಸಮಗ್ರ ವರದಿ ಸಭೆಗೆ ಮಾಹಿತಿ ನಿಡಿದರು. ಮತ್ತು ಮರಡಿಹಳ್ಳಿ ಪಶು ವೈದ್ಯಾಧಿಕಾರಿಗಳಾದ ಬಿ.ಎಮ್. ರಾಘವೇಂದ್ರ ಪ್ರಸಾದ್ ಹಾಗೂ ಗ್ರಾಮದ ಮುಖಂಡರಾದ ವಿಶ್ವನಾಥರೆಡ್ಡಿ. ಸಂಘದ ಮುಖ್ಯ ಕಾರ್ಯನಿರ್ವಾಹಕ ಪಿ.ಟಿ. ಹನುಮಂತರೆಡ್ಡಿ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

About The Author

Namma Challakere Local News
error: Content is protected !!