“ಶ್ರೀಶಾರದಾಶ್ರಮದಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದ ಪ್ರವಚನ ಮಾಲಿಕೆ”. ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದ ಎಂಬ ಪ್ರವಚನ ಮಾಲಿಕೆಯ ದಿವ್ಯ ಸಾನಿಧ್ಯ ವಹಿಸಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಸ್ವಾಮಿ ಬೋಧಾನಂದರ ಸ್ಮೃತಿಗಳ ಬಗ್ಗೆ ವಿಶೇಷ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಮಾತಾಜೀ ಅನನ್ಯಮಯೀ ಅವರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗೀತಾ ನಾಗರಾಜ್, ವನಜಾಕ್ಷಿ ಮೋಹನ್, ಯತೀಶ್ ಎಂ ಸಿದ್ದಾಪುರ, ಕಾವೇರಿ ಸುರೇಶ್ ಯಾದವ್, ವೈಷ್ಣವಿ,ಆಶಾ ನಾಗರಾಜ್, ಸಿ.ಎಸ್.ಭಾರತಿ, ಪಂಕಜ, ಮಾಣಿಕ್ಯ ಸತ್ಯನಾರಾಯಣ, ಜಯಾದಿತ್ಯ,ಕೆ.ಎಸ್ ವೀಣಾ,ಪ್ರೇಮಲೀಲಾ, ನಾಗರತ್ನಮ್ಮ,ಉಷಾ ಶ್ರೀನಿವಾಸ್ ,ಚೇತನ್, ಸಂತೋಷ್, ಮಾನ್ಯ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!