ಚಳ್ಳಕೆರೆ :
ಚಳ್ಳಕೆರೆ: ಇಲ್ಲಿ ಶಾಲಾ ಮಕ್ಕಳಿಗೆ ಆಫೀಸ್ ರೂಂ
ತರಗತಿಯಾಗಿದೆ
ಚಳ್ಳಕೆರೆ ಮಿಟ್ಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ
ಶಾಲೆಯಲ್ಲಿ ಮಕ್ಕಳಿಗೆ ಆಫೀಸ್ ರೂಂ ತರಗತಿಯಾಗಿದೆ. ಒಂದು
ಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದ, ಮೇಲ್ಬಾವಣಿಯಲ್ಲಿ ಆಸ್ತಿ
ಪಂಜರದಂತ್ತಾಗಿದೆ.
ಇದರಿಂದ ಆಫೀಸ್ ರೂಂನಲ್ಲಿಯೇ ಪಾಠ
ಮಾಡಲಾಗುತ್ತಿದೆ. ಅನೇಕ ಬಾರಿ ಮೇಲಾಧಿಕಾರಿಗಳಿಗೆ ದೂರು
ನೀಡಿದರು, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಕ್ಕಳ ಮೇಲೆ
ಮೇಲ್ಬಾವಣಿ ಬಿದ್ದು ಅನಾಹುತವಾಗಬಹುದೆಂಬ ಭಯ ಕಾಡುತ್ತಿದೆ.
ಆದಷ್ಟುಬೇಗನೇ ದುರಸ್ತಿ ಮಾಡಿಸಿಕೊಡಬೇಕೆಂದು ಗ್ರಾಮಸ್ಥರು
ಆಗ್ರಹಿಸಿದ್ದಾರೆ.

