ಚಳ್ಳಕೆರೆ :
ಬ್ರಹ್ಮಶ್ರೀ ನಾರಾಯಣ ಜಯಂತಿ ಅಂಗವಾಗಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರೇಹಾನ್ ಪಾಷ ಸಮಾಜದ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ಇನ್ನು ಬ್ರಹ್ಮಶ್ರೀ ನಾರಾಯಣ ಜಯಂತಿಯನ್ನು ಸೆಪ್ಟೆಂಬರ್ 7ರ ಭಾನುವಾರದಂದು ಚಳ್ಳಕೆರೆ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಈ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಪದಾಧಿಕಾರಿಗಳು ಮುಖಂಡರು ಮಹಿಳಾಮಣಿಯರು ಆಗಮಿಸಬೇಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಯಶಸ್ಸು ಗಳಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು
ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿಎ ಗಿರೀಶ್ ಮತ್ತು ಕೆ ಗಿರೀಶ್ ಶಿಕ್ಷಕರಾದ ರಮೇಶ್
ಓಬಿಸಿ ಬ್ಲಾಕ್ ಅಧ್ಯಕ್ಷರಾದ ಉಮೇಶ್ ಶಿಕ್ಷಕರಾದ ಕೃಷ್ಣಮೂರ್ತಿ ವಾಣಿಜ್ಯೋತಿಮಿಗಳಾದ ಬೇಕರಿ ವಿಜಯ್ ಓಂಕಾರ್
ಬೇಕರಿ ಪುನೀತ್ ಚೆನ್ನಮ್ಮನಾಗುತ್ತಿಹಳ್ಳಿ ಮಂಜುನಾಥ್
ಯುವಕ ಸಂಘದ ನಿರಂಜನ್ ಮತ್ತು ಹೆಲ್ತ್ ಇನ್ಸ್ಪೆಕ್ಟರ್ ಗಣೇಶ್ ಹಾಗೂ ನಗರಸಭಾ ಸದಸ್ಯರಾದ ನೆತಾಜಿ ಪ್ರಸನ್ನ ಶಿಕ್ಷಕರಾದ ರಮೇಶ್,
ಕ್ಲಾಸ್ ಒನ್ ಕಂಟ್ರಾಕ್ಟರ್ ಮಧು
ಇವರು ಹಾಜರಿದ್ದರು…

