ನಾಯಕನಹಟ್ಟಿ: ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯಿತಿಗೆ ಶನಿವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಂಜುಳಾ ರಂಗಸ್ವಾಮಿ ಉಪಾಧ್ಯಕ್ಷರಾಗಿ ಮಂಜಕ್ಕ ಚಂದ್ರಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಕೆ. ಎಸ್. ಸುರೇಶ್ ಘೋಷಣೆ ಮಾಡಿದರು.
ಒಟ್ಟು 16 ಸದಸ್ಯರ ಬಲವುಳ್ಳ ಗೌಡಗೆರೆ ಈ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಅನುಸೂಚಿತ ಜಾತಿ ಸ್ಥಾನವು ಮೀಸಲಾಗಿತ್ತು ಇಂದಿನ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಲಕ್ಷ್ಮಣ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ರಂಗಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಜಕ್ಕ ಚಂದ್ರಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣದಿಂದ ಇವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಕೆ ಎಸ್ ಸುರೇಶ್ ತಿಳಿಸಿದರು.
ಇದೆ ವೇಳೆ ಕಾಂಗ್ರೆಸ್ ಮುಖಂಡ ಬಂಡೆ ಕಪಿಲೆ ಓಬಣ್ಣ ಮಾತನಾಡಿದರು ಗೌಡಗೆರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವು ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ರವರ ಸಲ್ಲುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಬಾಲರಾಜ್ ಮಾತನಾಡಿದರು ಗೌಡಿಗೆರೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಸರ್ಕಾರದಿಂದ ದೊರೆಯುವ ಮೂಲಭೂತ ಸೌಲಭ್ಯಗಳನ್ನು ಗ್ರಾಮಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಬೇಕು ಎಂದರು.
ಇನ್ನೂ ಇದು ವೇಳೆ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ ಜಿ.ಬಿ. ಮುದಿಯಪ್ಪ ಮಾತನಾಡಿದರು
ಚುನಾವಣೆ ಪ್ರಕ್ರಿಯೆಯಲ್ಲಿ 11 ಜನ ಸದಸ್ಯರಾದ ಟಿ ರಂಗಪ್ಪ, ಶಾಂತಮ್ಮ, ರೇವಮ್ಮ, ನಾಗಣ್ಣ, ಸಣ್ಣಪ್ಪ, ಸರೋಜಮ್ಮ, ರಾಧಮ್ಮ, ಎಂ ಎಚ್ ಲಕ್ಷ್ಮಣ್, ಜಿ.ಒ.ಓಬಳೇಶ್ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ, ಹುರುಳಿ ತಿಪ್ಪೇಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ಸಿ.ಬಿ ಮೋಹನ್, ಬಗರ್ ಹುಕ್ಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ, ಪಿಡಿಒ ಸಿ.ಈಶ್ವರ್, ಕಾರ್ಯದರ್ಶಿ ಚಂದ್ರಿಕಾ, ವರವುಶಂಕರ್ ಮೂರ್ತಿ, ಎಚ್ ಬಿ ತಿಪ್ಪೇಸ್ವಾಮಿ, ರಂಗಪ್ಪ ಗೌಡಗೆರೆ, ಜಿಡಿಆರ್ ತಿಪ್ಪೇಸ್ವಾಮಿ, ಜೆ ಟಿ ತಿಪ್ಪೇಸ್ವಾಮಿ ಗೌಡಗೆರೆ, ಯರ್ರಿ ಸ್ವಾಮಿ ,ಎಸ್ ಓ ತಿಪ್ಪೇಸ್ವಾಮಿ ಶಿವಮೂರ್ತಿ, ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ಹೋಬಳಿ ಘಟಕ ಅಧ್ಯಕ್ಷ ಜೋಗಿಹಟ್ಟಿ ಕೆ.ಜಿ. ಮಂಜುನಾಥ್ ಯೋಗಾನಂದ, ಸಣ್ಣ ಬಾಲಪ್ಪ ಶ್ರೀದರು ಪಿ.ಓ. ತಿಪ್ಪೇಸ್ವಾಮಿ, ಗೌತಮ್ಮ, ಓಬಳೇಶ್, ಕ್ಯಾಸಯ್ಯ, ನಾಗರಾಜು, ಶಿವಮೂರ್ತಿ ಜೆಸಿಬಿ, ಜಿ ಮುರುಳಯ್ಯ. ಮಂಜಣ್ಣ ಗೌಡಗೆರೆ, ಸೇರಿದಂತೆ ಗೌಡಗೆರೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ವಿವಿಧ ಹಳ್ಳಿಗಳ ಮುಖಂಡರು ಗ್ರಾಮಸ್ಥರು ಇದ್ದರು

