ಚಳ್ಳಕರೆ,ಮೊಳಕಾಲ್ಮುರು &ಹಿರಿಯೂರು ತಾಲೂಕಿನ ಎಲ್ಲಾ ಕೃತಕ ಗರ್ಭಧಾರಣಾ ಕೇಂದ್ರಗಳ ಕಾರ್ಯಕರ್ತರಿಗೆ ಇಂದು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಚಳ್ಳಕೆರೆಯ ನಂದಿನಿ ಉಪ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಸದರಿ ಸಂಧರ್ಭದಲ್ಲಿ
ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದ ಶ್ರೀ ಬಿ.ಸಿ. ಸಂಜೀವ ಮೂರ್ತಿರವರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಕೃ ಗ ಸೇವೆಯನ್ನು ಎಲ್ಲಾ ಸಂಘಗಳಿಗೆ ವಿಸ್ತರಿಸುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಲು ಹಾಗೂ ಜಾನುವಾರುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮವಿಡಲು ಮಾಹಿತಿ ನೀಡಿದರು. ಇದೆ ಸಂಧರ್ಭದಲ್ಲಿ ಕೃ ಗ ಕಾರ್ಯಕರ್ತರಿಗೆ ರೈನ್ ಕೋಟ್ ಮತ್ತು Tag ಗಳನ್ನು ವಿತರಿಸಿದರು.ಸದರಿ ಸಂಧರ್ಭದಲ್ಲಿ ವಿಭಾಗಾಧಿಕಾರಿಗಳಾದ ಶ್ರೀ ಎಂ. ಪುಟ್ಟರಾಜು,ತರಬೇತಿ ಕಾರ್ಯಾಗಾರಕ್ಕೆ ಮಾರ್ಗದರ್ಶಕರಾಗಿ ಬಂದಿದ್ದ ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಡಾ ಸೂರಜ್, ವಿಸ್ತರಣಾಧಿಕಾರಿಗಳಾದ ಕೃಷ್ಣಕುಮಾರ್, ಪಶು ವೈದ್ಯ ಸಲಹೆಗಾರರಾದ ಡಾ ಸತ್ಯ ನಾರಾಯಣ, ಡಾ. ಪುನೀತ್. ಡಾ ಧೀರಜ್ ಮತ್ತು ಉಪ ಕಛೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

