ಚಳ್ಳಕೆರೆ : ಸರಕಾರ ರಚಿಸಿದ ಡಾ.ನಾಗಮೋಹನ್ ದಾಸ್ ವರದಿಯ ಒಳಮೀಸಲಾತಿ ಜಾತಿ ಸಮೀಕ್ಷೆಯಿಂದ ಹಲವಾರು ಕುಟುಂಬಗಳು ವಂಚಿತವಾಗಿದ್ದಾವೆ. ಗಣಿತದಾರರ ನಿರ್ಲಕ್ಷ ಧೋರಣೆಯೆ ಕಾರಣ ಎಂದು ಜಾತಿ ಸಮೀಕ್ಷೆಯಿಂದ ವಂಚಿತರಾದ ಕುಟುಂಬಗಳ ಆಕ್ರೋಶವಾಗಿದೆ.

ರಾಜ್ಯದ್ಯಂತ ಜಾತಿಗಣತಿ ನಡೀತಿರೋ ಸಂದರ್ಭದಲ್ಲಿ ಗಣತಿ ದಾರರ ನಿರ್ಲಕ್ಷದಿಂದ ಹಲವಾರು ಕುಟುಂಬಗಳು ಜಾತಿಗಣತಿಯಿಂದ ಹೊರಗುಳಿಯುವಂತಹ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.

ಹೌದು ಕಳೆದ ಹಲವು ದಿನಗಳಿಂದ ಜಾತಿ ಸಮೀಕ್ಷೆ ಸರ್ಕಾರ ನಡೆಸುತ್ತಿದೆ ಆದರೆ ಕೆಲವು ಗಣತಿ ದಾರರ ನಿರ್ಲಕ್ಷ್ಯ ಮನೋಭಾವದಿಂದ ನಗರ ವ್ಯಾಪ್ತಿಯಲ್ಲಿ ಹಲವಾರು ಕುಟುಂಬಗಳು ಜಾತಿ ಸಮೀಕ್ಷೆಯಿಂದ ವಂಚಿತವಾಗಿದ್ದಾವೆ ಎಂದು ಹೇಳಲಾಗಿದೆ.

ಅದರಂತೆ ಚಳ್ಳಕೆರೆ ನಗರದ ತ್ಯಾಗರಾಜ ನಗರ ವಾರ್ಡ್ ನಂಬರ್ 11 ರ ಹಾಗೂ ಇತರೆ, ಬೂತ್ ನಂ- 98-99 ಹಾಗೂ ಇತರೆ ಸ್ಥಳಗಳ ಮನೆಗೆ ಗಣತಿದಾರರು ಬಾರದೆ ಜಾತಿ ಸಮೀಕ್ಷೆ ನಡೆಸದೆ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ.

ಇನ್ನೂ ನಗರ ವ್ಯಾಪ್ತಿಯಲ್ಲಿ ಒಂದು ವಾರ್ಡನಿಂದ ಮತ್ತೊಂದು ವಾರ್ಡ್ ಗೆ ಬಾಡಿಗೆ ಮನೆಯಲ್ಲಿ ವಾಸಿಸುವ ನಿವಾಸಿಗಳ ಜಾತಿ ಗಣತಿ ಸರಿಯಾದ ರೀತಿಯಲ್ಲಿ ನಡೆಸದೆ, ಗಣತಿದಾರರು ..ನಿರ್ಲಕ್ಷ್ಯ ಕಾಣುತ್ತದೆ. ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

About The Author

Namma Challakere Local News
error: Content is protected !!