ನಾಯಕನಹಟ್ಟಿ: ಜಗಳೂರು ತಾಲ್ಲೂಕಿನ ಹಿರೇಮಲ್ಲನಹೊಳೆ ರೇಖಲಗೆರೆ ಫೀಡರ್ ಚಾನಲ್ ಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು ರೇಖಲಗೆರೆ ಫೀಡರ್ ಚಾನಲ್ 2024-25ನೇ ಸಾಲಿನಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣನವರು ಚಾನಲ್ ಪುನರ್ ಚೇತನಕ್ಕೆ ಸುಮಾರು 5 ಕೋಟಿ ಅನುದಾನವನ್ನು ನೀಡಿ ನಾಯಕನಹಟ್ಟಿ ಹೋಬಳಿಯ ಭಾಗದ ರೇಖಲಗೆರೆ ಗುಂತಕೋಲಮ್ಮನಹಳ್ಳಿ ರಾಮಸಾಗರ, ಕೋಡಿಹಳ್ಳಿ ಕರೆಗಳು ಭರ್ತಿ ಆಗಿದ್ದು, ಕೆಲದ ಮೂರು ನಾಲ್ಕು ದಿನಗಳಿಂದ ಸುರಿದ ಧಾರಾಕರ ಮಳೆಗೆ ಕಾಲುವೆಯಲ್ಲಿ ನೀರು ಸರಗವಾಗಿ ಹರಿಯುತ್ತಿದ್ದು ಕಾಮಗಾರಿ ಪೂರ್ಣ ಹಂತದಲ್ಲಿ ಇದೆ, ಮುಂಬರುವ ದಿನಗಳಲ್ಲಿ ಕರೆಗಳು ಭರ್ತಿಯಾಗುವ ನಿರೀಕ್ಷೆ ಇದೆ ಇದ್ದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ನಾಯಕನಹಟ್ಟಿ ಹೋಬಳಿ ಭಾಗದ ಮಲ್ಲೂರಹಳ್ಳಿ, ಓಬಯ್ಯನಹಟ್ಟಿ, ರೇಖಲಗೆರೆ ಗುಂತಕೋಲಮ್ಮನಹಳ್ಳಿ, ಭರಮಸಾಗರ, ರಾಮಸಾಗರ, ಕರೆಯಾಗಳಹಳ್ಳಿ ಗ್ರಾಮಗಳ ರೈತರು ಮುಖದಲ್ಲಿ ಮಂದಹಾಸ ಮೂಡುವಂತವಾಗಿದೆ ಎಂದರು.
ಪರಿಶಿಷ್ಟ ಜಾತಿ ವಿಭಾಗ ತಳಕು ಮತ್ತು ನಾಯಕನಹಟ್ಟಿ ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷ ಆರ್. ಬಸವರಾಜ್ ಮಾತನಾಡಿದರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರು 2024ರಲ್ಲಿ ಹಿರೇಮಲ್ಲನಹೊಳೆಯ ಬಳಿ ರೇಖಲಗೆರೆ ಪೀಲ್ಟರ್ ಚಾನಲ್‌ಗೆ 5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆಯನ್ನು ನೀಡಿದರು ವರುಣನ ಆರ್ಭಟಕ್ಕೆ ಕಳೆದ ಮೂರು ನಾಲ್ಕು ದಿನಗಳಿಂದ ಈ ಭಾಗದಲ್ಲಿ ಮಳೆ ಸುರಿಯುತ್ತಿದ್ದು ರೇಖಲಗೆರೆ ಪೀಲ್ಟರ್ ಚಾನಲ್ ನೀರು ಸರಗವಾಗಿ ಹರಿಯುತ್ತಿದೆ ಪಕ್ಕದ ಜಿಣಿಗಿ ಹಳ್ಳ ನೀರು ಸಹ ಹರಿಯುತ್ತಿದ್ದು, ನಮ್ಮ ಶಾಸಕರು ರೈತರ ಏಳಿಗೆಗಾಗಿ ಇಂತಹ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಶಾಸಕ ಎನ್ ವೈ ಗೋಪಾಲಕೃಷ್ಣ ರೈತರ ಪಾಲಿಗೆ ಕಲಿಯುಗ ಭಗೀರಥ ಎನ್ನುವ ರೀತಿ ರೈತರು ಮಾತಾನಾಡುತ್ತಾರೆ ಎಂದರು.
ನಾಯಕನಹಟ್ಟಿ ಓಬಳೇಶ್ ಮಾತನಾಡಿದರು ಶಾಸಕ ಎನ್ ವೈ ಗೋಪಾಲಕೃಷ್ಣನವರು ಈ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಾರೆ ರೇಖಲಗೆರೆ ಪೀಲ್ಟರ್ ಚಾನಲ್ ಉತ್ತಮ ಕಾಮಗಾರಿಯಾಗಿದ್ದು ಶಾಸಕರಿಗೆ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದರು.
ಇದೇ ವೇಳೆ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ರೇಖಲಗೆರೆ ವೀರೇಶ, ರೇಖಲಗೆರೆ ಆರ್ ಪ್ರಕಾಶ್ ಇದ್ದರು.

