ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಚಿತ್ರ ನಾಯಕನಹಳ್ಳಿ ಹಾಗೂ ಚನ್ನಗಾನಹಳ್ಳಿಗೆ KSRTC ಬಸ್ ಸೌಲಭ್ಯ ಕಲ್ಪಿಸಿ ಕೊಡುವಂತೆ ಪ್ರಭಾಕರ ಮ್ಯಾಸನಾಯಕ ಮನವಿ
ಚಳ್ಳಕೆರೆಯಿಂದ ಚಿಕ್ಕ ಉಳ್ಳಾರ್ತಿ ಮಾರ್ಗವಾಗಿ ದೊಡ್ಡ ಉಳ್ಳಾರ್ತಿಗೆ ಬರುವಂತ ಕೆಎಸ್ಆರ್ಟಿಸಿ ಬಸನ್ನು ಚಿತ್ರನಾಯಕನಹಳ್ಳಿ ಮಾರ್ಗವಾಗಿ ಚನ್ನಗಾನಹಳ್ಳಿಗೆ ಮುಂದುವರಿಸಿ ಕೊಡುವಂತೆ ಚಿತ್ರದುರ್ಗ ಕೆ ಎಸ್ ಆರ್ ಟಿ ಸಿ ವಿಭಾಗ DTO ಅವರಿಗೆ ಮತ್ತು ಚಳ್ಳಕೆರೆ ಡಿಪೋ ಮ್ಯಾನೇಜರ್ ಅವರಿಗೆ ಬಿಜೆಪಿ ಮುಖಂಡ ಪ್ರಭಾಕರ್ ಮ್ಯಾಸ ನಾಯಕ ಅವರು ದೂರವಾಣಿ ಕರೆ ಮಾಡಿ ಮಾತನಾಡಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿಟಿಓ ಮತ್ತು ಡಿಪೋ ಮ್ಯಾನೇಜರ್ ಅವರು ಸರ್ವೆ ಮಾಡಿ ಚನ್ನಗಾನಹಳ್ಳಿ ತನಕ ಬಸ್ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.

